ಕುರಿಯಂತಾದ ಹುಲಿ
ಕುರಿಯಂತಾದ ಹುಲಿ

1 min

214
ಅಮ್ಮನ ಮಾತನು
ಕೇಳಲು ಬಯಸದ
ಹುಲಿಮರಿ ಒಂದು
ದಾರಿಯು ತಪ್ಪಿತ್ತು
ಹುಲಿ ಎಂದರಿಯದೆ
ಘರ್ಜನೆ ಮರೆತು
ಮಂದೆಯ ಸೇರಿ
ಕುರಿಯಂತಾಗಿತ್ತು
ಕಾಡಲಿ ಮೇಯಲು
ಕುರಿಗಳು ಬಂದು
ನೀರನು ಕುಡಿಯಲು
ಹುಲಿಮರಿ ನಿಂತಿತ್ತು
ದೂರದಿ ಕಂಡ
ಹುಲಿಮರಿಯನ್ನ
ಹಾರುತ ಬಂದು
ಅಮ್ಮನೆ ಹಿಡಿದಿತ್ತು
ಹೆದರಿದ ಹುಲಿಮರಿ
ಅಮ್ಮನ ಕಂಡು
ಘರ್ಜಿಸಲಾಗದೆ
ಮೇ ಮೇ ಅಂದಿತ್ತು
ನೀರಲಿ ಅದರ
ಮುಖವನು ತೋರಿಸಿ
ಹುಲಿ ನೀ ಎಂದು
ಘರ್ಜಿನೆ ಕಲಿಸಿತ್ತು