ನಾವು ಹೀಗೇಕೆ ?
ನಾವು ಹೀಗೇಕೆ ?
1 min
41
ಹೊಡೆದ ನಂತರ ಊರೆಲ್ಲಾ ಕೊಳ್ಳೆ
ಹೇಳ್ತಾರೆ ಜೀವನ ನೀರ ಮೇಲಿನ ಗುಳ್ಳೆ,
ಆಸೆ ಕಂಡಿದ್ದೆಲ್ಲಾ ತನಗೇ ಇರಬೇಕು
ಹೇಳೋದು ಹುಟ್ಟಿದವ ಸಾಯಲೇ ಬೇಕು,
ಬಿಟ್ಟಿ ಆದರೆ ಬೇಕು ಸಿಕ್ಕಿದ್ದೆಲ್ಲಾ
ಆದರೆ ಇಂದು ಇದ್ದೋನು ನಾಳೆ ಇಲ್ಲ,
ಪಕ್ಕದವನ ಅರ್ಧ ಅಡಿಗೆ ತಲೆ ಕಡಿತಾನೆ
ಹೇಳೋದು ಮಾತ್ರ ಕೊನೆಗೆ ಆರಡಿ ತಾನೆ
ನಮ್ಮವರೇ ಹೋದಾಗ ಮುಂದೆ ಹೇಗಪ್ಪ
ಯಾರೋ ಆದರೆ ಜೀವನ ಅಷ್ಟೇನಪ್ಪ