ಮಿನುಗು ತಾರೆ
ಮಿನುಗು ತಾರೆ
1 min
29
ಬಿರು ಬಿಸಿಲ್ಬಸವಳಿದು
ಮನೆಗೆ ಬಂದಾಗ
ಹುಣ್ಣಿಮೆಗೆ ಹರಿದ
ಬೆಳದಿಂಗಳೆನ್ಮನಕೆ
ಮುದನೀಡಿತ್ತು
ಭುವಿಗೆನ್ನ ಬೆನ್ತಾಗಿಸಿ
ಚಾವಣಿ ಮೇಲ್ಮಲಗಿ
ಕಂಡ ತಾರೆಗಳ್ತೋಟ
ಮನದ ಬೇಗುದಿಯ
ದೂರ ದೂಡಿತ್ತು
ಎಣಿಸಲ್ಕೂತೆ ಏಕೋ
ಮಕ್ಕಳಂತೆ
ಮಿನುಮಿಗುತಲೇ
ಭುವಿಗೆ ಬೀಳುವ
ನಕ್ಷತ್ರ ಭಯ ಕಾಡಿತ್ತು
ಗಗನ ಚುಂಬಿ
ಮೇರು ಕಟ್ಟಡಗಳ
ಪ್ರಖರ ಬೆಳಕಿಗೆ
ಶಶಿಯುದಯವಾಗದೆ
ನಿಶೆ ಹೆದರಿ ಓಡಿತ್ತು
