ಬತ್ತಳಿಕೆ !
ಬತ್ತಳಿಕೆ !
ಬಡತನದಲ್ಲಿದ್ದಳು
ಬಾಳಲ್ಲಿ ಬಂದಳು
ಬಳ್ಳಿಯಂತಿದ್ದಳು
ಬೆಳಕಲ್ಲೆ ಬೆಳೆದಳು
ಭಯದಿ ಬರಲೊಪ್ಪಳು
ಬಂಧನ ಬೇಡೆಂದಳು
ಬರಸೆಳೆಯಲು ಬರಳು
ಬಿಗಿದು ಬಿಸಿಯುಸಿರೊಳು
ಬೇಡದ ಬಂಧಕಗಳು
ಬೋಳಾದ ಬೆನ್ನುಗಳು
ಬೆಚ್ಚಿದ ಬೆರಳಾಟಗಳು
ಬಿರುಸಿನ ಬೇಡಿಕೆಗಳು
ಬೆತ್ತಲೆ ಭಾವನೆಗಳು
ಬತ್ತದ ಬತ್ತಳಿಕೆಗಳು
ಬಿರುಸಿನ ಬಾಣಗಳು
ಬಡಿದ ಬರಸಿಡಿಲುಗಳು
ಬಸವಳಿದು ಬೆರೆತಳು
ಬರಿದಾಗಿ ಭೋರ್ಗರೆದಳು