ಯುಗಾದಿ
ಯುಗಾದಿ

1 min

183
ಶಿಶಿರ ಕಳೆದು
ಚೈತ್ರ ಹರಿದು
ಹಚ್ಚ ಹಸಿರು
ಹೊತ್ತುಕೊಂಡು
ಮತ್ತೆ ಬಂತು
ಹೊಸ ಯುಗಾದಿ
ಅದೇ ಸೂರ್ಯ
ಅದೇ ಬೆಳಕು
ಬೆಸೆದುಕೊಂಡು
ಹೊಸತು ತಳುಕು
ಮರಳಿ ಬಂತು
ಹೊಸ ಯುಗಾದಿ
ಕಹಿ ನೆನಹುಗಳ
ಮಸುಕು ಕರಗಿ
ಹೊಸ ಕನಸುಗಳ
ನಸುಕು ಮೂಡಿ
ಮತ್ತೆ ಬಂತು
ಹೊಸಯುಗಾದಿ
ಹಳೆಯ ಕಣ್ಣು
ಹೊಸತು ದೃಷ್ಟಿ
ಹಳೆಯ ಬೇರು
ಹೊಸತು ಚಿಗುರು
ಬೆಸೆದು ಬಂತು
ಹೊಸ ಯುಗಾದಿ