STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಯಾರೀ ಕಲಾವಿದ?

ಯಾರೀ ಕಲಾವಿದ?

1 min
242

ಆಕಾಶಕೆ ನೀಲಿ ಬಣ್ಣವ ಬಳಿದು

ಅವನಿಯೊಳು ನೀರ ಚಿಲುಮೆ ಉಕ್ಕಿಸಿ

ಗಿಡ ಮರ ಗಳಿಗೆ ಹಸಿರು ಬಣ್ಣ ನೀಡಿ

ಹಲವು ವರ್ಣಚಿತ್ರಗಳ ರಚಿಸಿದ

ಕಲಾವಿದ ಯಾರಿವನು?

ತಾನೇ ಸೃಷ್ಟಿಸಿದ ಆಟಿಕೆಯ

ತನ್ನ ನೆಚ್ಚಿನ ಗೊಂಬೆಗಳಿಗೆ

ತಾನೇ ಜೀವಶಕ್ತಿಯ ನೀಡಿ

ಅವುಗಳ ಆಟವ ನೋಡಿ ನಲಿವ

ಕಲಾಕಾರ ಯಾರಿವನು ?

ತನ್ನ ಸೃಷ್ಟಿಯ ಕಲಾಕೃತಿಗಳ

ನಗಿಸಿ ಅಳಿಸಿ ಆಡಿಸುತ್ತಾ

ಕಡೆಗೊಮ್ಮೆ ಆಟಿಕೆಗಳೆಲ್ಲವನು

ತನ್ನೊಳಗೇ ಸೆಳೆದೊಯ್ಯುವ

ಕಲೆಗಾರ ಯಾರಿವನು ?



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract