ಗಜಾನನ
ಗಜಾನನ
ಏಕದಂತನೇ ಶೂರ್ಪಕರ್ಣನೇ
ಲಂಬೋದರ ಹೇ ಗಜಾನನ
ಮೂಲಾಧಾರ ಚಕ್ರದ ಒಡೆಯನೇ
ವಿಘ್ನ ವಿನಾಶಕ ಹೇ ಗಜಾನನ
ಭಾದ್ರಪದ ಶುಕ್ಲದ ಚೌತಿಯ ದಿನದಿ
ಪೂಜಿಪ ದೇವನೇ ಗಜಾನನ
ಪಾರ್ವತಿ ನಂದನ ಷಣ್ಮುಖಗನುಜ
ಈಶನ ಸುತನೇ ಗಜಾನನ
ಮಾತಾ ಪಿತರಲಿ ಜಗವನು ಕಂಡ
ವಿನೀತ ಸುತನೇ ಗಜಾನನ
ಭಕ್ತರ ಕಷ್ಟವ ಕಳೆಯುವ ದೇವನೇ
ಆದಿಪೂಜಿತ ಹೇ ಗಜಾನನ
ವಿಜಯಭಾರತೀ.ಎ.ಎಸ್.
