STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ದೇವಗಂಗೆ

ದೇವಗಂಗೆ

1 min
169

ಹಿಮಗಿರಿಯ ತೊಳೆ ತೊಳೆದು

ಅಮರಲೋಕದಿಂದಿಳಿದು

ಸುಮನೋಹರಿ ಜಲಧಿ

ಅಮರ ದೇವ ಗಂಗೆ

ನಮಗೆ ತಾಯಿ ನೀನಾದೆ

ಹರನ ಜಟೆಯಿಂದಿಳಿದು

ಧರೆಯ ತಾಪವ ತಣಿಸಿ

ನರರ ಪಾಪವ ಕಳೆದು

ಸುರಗಂಗೆ ಎನಿಸುತಾ

ಧರಣಿಯ ತಾಯಿ ನೀನಾದೆ

ಜೀವಜಲ ಜಾಹ್ನವಿ

ಭುವಿಗಿಳಿದ ದೇವತೆ

ಅವನಿಯಮೃತಮತಿ

ಜೀವ ಸಂಜೀವಿನಿ

ದೇವಗಂಗೆ ತಾಯಿ ನೀನಾದೆ

ನೀನಿಲ್ಲದೆ ನೆಲ ಬರಡು

ನೀನಿದ್ದರೆ ಬನ ಹಸಿರು

ನೀನಿದ್ದರೆ ಜೀವಕೆ ಉಸಿರು

ನೀನೊಲಿದರೆ ಜೀವನ

ನೀನಿಳೆಯ ತಾಯಿ ನೀನಾದೆ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract