ನನ್ನವ್ವ
ನನ್ನವ್ವ
ನನ್ನವ್ವನ ಹರಕೆ
ಅಕ್ಷರದಾತೆ ಆನಂದದಾತೆ ಜೀವನ ಮೌಲ್ಯವ ಕಲಿಸಿದ ಮಾತೆ
ನುಡಿದಂತೆ ನಡೆಯಲು ಹಾದಿ ತೋರಿದ ಜನ್ಮದಾತೆ
ನನ್ನ ಜೀವನದ ದೈವ ಮೂರ್ತಿಯು ನೀನೆ ಅಲ್ಲವೆ?
ಹಿರಿಯರಿಗೆ ಶಿರಬಾಗಿ
ಕಿರಿಯರಿಗೆ ಮಾದರಿಯಾಗಿ ದೀನದಲಿತರಿಗೆ ದಾರಿದೀಪವಾಗಿ
ಜೀವನ ನಡೆಸಲು ಕಲಿಸಿದವಳು ನೀನೇ ಅಲ್ಲವೆ?
ಗುರುಗಳ ಮಾತಿಗೆ ತಲೆಬಾಗಿ ನಡೆಯುತ್ತಾ
ನೆರೆಹೊರೆಯವರ ಅಕ್ಕರೆಯ ಪ್ರೀತಿಗೆ ಸೋಲುತ
ತಾನು ಬೆಳೆದು ನಂಬಿದವರನ್ನು ಬೆಳೆಸುತ
ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ?
ನನ್ನಯ ಬಾಳಿಗೆ ಬೆಳಕನ್ನು ತೋರಿ
ಬದುಕುವ ಕಲೆಯನ್ನು ಕಲಿಸಿಕೊಟ್ಟೆ
ಎಲ್ಲರೊಳಗೊಂದಾಗಿ ಬಾಳುವ
ಗುಣವ ಬೆಳೆಸಿದೆ ನೀನು
ಜಗದ ಜನರು ಮೆಚ್ಚುವ ಮಗನಾಗಿರು ಎಂದು
ಶುಭವ ಕೋರಿದ ದೈವ ನೀನೇ ಅಲ್ಲವೇ? ನನ್ನವ್ವ