ನಮ್ಮ ಕನ್ನಡ
ನಮ್ಮ ಕನ್ನಡ
ನಮ್ಮ ಸುಂದರ ನಾಡು
ಬನ್ನಿರಿ ಮಕ್ಕಳೆ ಎಲ್ಲರು ಸೇರಿ ಕನ್ನಡ ಹಬ್ಬವ ಮಾಡೋಣ
ಎಲ್ಲರ ಮನದಲಿ ಎಲ್ಲರ ಗುಣದಲಿ ಕನ್ನಡ ಭಾಷೆಯ ಬಿತ್ತೋಣ
ಕನ್ನಡೇತರರು ಕನ್ನಡ ಭಾಷೆಯ ಕಲಿಯುವಂತೆ ಮಾಡೋಣ
ಜ್ಞಾನಪೀಠವ ಪಡೆದ ಕವಿಗಳ ಸಾಧನೆಯನ್ನು ತಿಳಿಸೋಣ
ಕನ್ನಡ ಮಣ್ಣಿನ ಕನ್ನಡ ಋಣವ ತೀರಿಸೊ ಬಗೆಯನು ಸಾರೋಣ
ನಮ್ಮಯ ನೆಲವು ನಮ್ಮಯ ಜಲವು ಶ್ರೇಷ್ಠತೆಯೆಂದು ತಿಳಿಸೋಣ
ಕನ್ನಡಿಗರೆಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುತ ಬಾಳೋಣ
ಏನೇ ಆಗಲಿ ಏನೇ ಬರಲಿ ಒಗ್ಗಟ್ಟಿನಿಂದ ಬದುಕೋಣ
ಮಾಸ್ತಿ ಎಂಬುದು ಕನ್ನಡ ಆಸ್ತಿಯು ಎಂಬುದನು ನಾವು ಅರಿಯೋಣ
