STORYMIRROR

Masthi Babu M

Classics Inspirational Others

4  

Masthi Babu M

Classics Inspirational Others

ಲೆಕ್ಕ ಹಾಕಲಾದೀತೇ?

ಲೆಕ್ಕ ಹಾಕಲಾದೀತೇ?

1 min
265


ನಾ ನಡೆದು ಬಂದ ಹಾದಿಯ

ಹೆಜ್ಜೆಗಳನು ಲೆಕ್ಕ ಹಾಕಲಾದೀತೇ????


ನಾನುಂಡ ಕಷ್ಟನಷ್ಟಗಳ

ಕಹಿ ಅನುಭವಗಳ ಲೆಕ್ಕ ಹಾಕಲಾದೀತೇ????


ಆಪ್ತರೆ ನಂಬಿಸಿ, ವಂಚಿಸಿದ

ಸಂದರ್ಭಗಳನು ಲೆಕ್ಕ ಹಾಕಲಾದೀತೇ?


ಜೀವನದ ಹಾದಿಯಲಿ

ಕೈತಪ್ಪಿ ಹೋದ ಅವಕಾಶಗಳ‌

ಲೆಕ್ಕ ಹಾಕಲಾದೀತೇ????


ಆಡಿದ ಮಾತು, ಮನಸಿಗಾದ ನೋವನು

ಅನ್ಯರ ಮುಂದೆ ಲೆಕ್ಕ ಹಾಕಲಾದೀತೇ????


ಕೀರ್ತಿಯ ಗಳಿಸಲು ನೀ

ಪಟ್ಟ ಪಾಡನ್ನು ಲೆಕ್ಕ ಹಾಕಲಾದೀತೇ????


ಉತ್ತಮ ಗುರುವಾಗಲು ವಿದ್ಯಾರ್ಥಿಗಳಿಗೆ ನೀ 

ತೋರಿದ ಮಾರ್ಗಗಳನು

ಲೆಕ್ಕಹಾಕಲಾದೀತೇ????


ನಿನ್ನ ಜೀವಕೆ ನೀ ಶಿಲ್ಪಿಯಾಗಲು

ಅನುಸರಿಸಿದ ಮಾರ್ಗಗಳನು ಲೆಕ್ಕ ಹಾಕಲಾದೀತೇ????




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics