STORYMIRROR

Masthi Babu M

Classics Inspirational Others

4  

Masthi Babu M

Classics Inspirational Others

"ನನ್ನ ನಾಡಿನ‌ ಹೆಮ್ಮೆಯ ಹಬ್ಬ"

"ನನ್ನ ನಾಡಿನ‌ ಹೆಮ್ಮೆಯ ಹಬ್ಬ"

1 min
236


ಬರುತಿದೆ ಬರುತಿದೆ ನಮ್ಮಯ ಹಬ್ಬ

ಅದುವೆ ಕನ್ನಡ ನಾಡಿನ ಹಬ್ಬ,

ಬನ್ನಿರಿ ಎಲ್ಲರು ಸೇರೋಣ

ಕನ್ನಡ ದೀಪವ ಹಚ್ಚೋಣ,

ಕಲಿ ವೀರರ ಕೆಚ್ಚೆದೆಯಲಿ

ಹರಿಯಲಿ ನಮ್ಮಯ ಕನ್ನಡ ಕಂಪು,

ಎಲ್ಲರ ಮನಕೆ ಸಂತಸ ನೀಡಿ

ನಾಡಿನ ಬಾವುಟ ಹಾರುತಲಿರಲಿ,

ನಮ್ಮಯ ತಾಯಿ

ಭುವನೇಶ್ವರಿಯ 

ಮಹಿಮೆಯ ಎಲ್ಲೆಡೆ ಸಾರೋಣ,

ಕನ್ನಡಿಗರಲ್ಲದ ಜನರಲಿ 

ಕೂಡಿ ನಮ್ಮಯ ಭಾಷೆಯ ಕಲಿಸೋಣ,

ಶೂರರು‌ ನಾವೇ ಧೀರರು ನಾವೇ

ಎಂಬುದ ಲೋಕಕೆ ತೋರೋಣ,

ಚಿನ್ನದ ನಾಡು ಗಂಧದ ಬೀಡಿನ ಇತಿಹಾಸವನು ತಿಳಿಸೋಣ.


ಕೆಚ್ಚೆದೆಯ ವೀರ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ದಿನದ ಶುಭಾಶಯಗಳು‌.



Rate this content
Log in

Similar kannada poem from Classics