ಬಿಸಿಲಿನ ತಾಪ
ಬಿಸಿಲಿನ ತಾಪ
1 min
15
ಬಿಸಿಲಿನ ತಾಪಕೆ
ಉರಿಯುತಿಹುದು ಧರೆಯ ಒಡಲು
ಎಲ್ಲೆಲ್ಲೂ ಬಿಸಿಲಿನ ಬೇಗೆಗೆ
ಬೇಸತ್ತಿಹುದು ಗಿಡ, ಮರ,ಬಳ್ಳಿಗಳು
ವರುಣನ ಕೃಪೆ ಇಲ್ಲದಾಗಿದೆ ಇಂದು
ಮನುಜನ ಸ್ವಾರ್ಥದ ಫಲದಿ
ಧರೆಯು ಬೆಂಕಿಯ ಜ್ವಾಲೆಯಾಗಿ
ಎಲ್ಲವನು ಕಬಳಿಸಲು ಕಾಯುತಿಹುದು
ನೀರಿಗಾಗಿ ಎದ್ದಿಹುದು ಆಹಾ.. ಕಾರ
ಪ್ರಕೃತಿಯು ಉರಿದು ಬೂದಿಯಾಗುತಿಹುದು
ತರಲಾಗದು ಜೀವಿಗಳಿಗೆ ಜಲವ
ಎಲ್ಲವನು ಉಳಿಸುವ ಪರಿಯು ಕಾಣದಾಗಿಹುದು
ಧಗ ಧಗನೆ ಉರಿಯುತಿರುವ ಧರೆಯೊಳಗೆ
ಲಾವಾರಸವು
Advertisement
ಹೊರಬರಲು ತವಕಿಸುತಿಹುದು
ಮನುಜನಿಗಿಲ್ಲ ಮುಂದೆ ಉಳಿಗಾಲವೆಂದು
ಪ್ರಕೃತಿಯ ಧಗೆಯು ಹೆಚ್ಚುತಿಹುದು
ಹಿರಿಯರು ಹೇಳಿದ ಮಾತದೋ ಮರುಕಳಿಸುತಿಹುದು
ಗಿಡ ನೆಡಿ ಗಿಡ ನೆಡಿ ಗಿಡಾ ನೆಡಿ
ಎಂಬ ವೇದವಾಕ್ಯದ ಅರಿವಾಯ್ತು
ಬನ್ನಿ ಈಗಲಾದರೂ ಎಚ್ಚೆತ್ತುಕೊಂಡು
ಗಿಡ ನೆಟ್ಟು ಕಾಡು ಬೆಳೆಸೋಣ,
ಬಿಸಿಲಿನ ತಾಪವ ನಿಲ್ಲಿಸೋಣ
ವರುಣನ ಕೃಪೆಗೆ ಪಾತ್ರರಾಗೋಣ
ಬಿಸಿಯ ಗಾಳಿಯನು ತಂಪಾಗಿಸೋಣ
ಜೀವ ಜಗತ್ತನ್ನು ಉಳಿಸೋಣ.
ಡಾ. ಮಾಸ್ತಿ ಬಾಬು
ಬೆಂಗಳೂರು