ನಲ್ಮೆಯ ಲೇಖಕಿ: ಸಾ.ರಾ.ಅಬೂಬಕ್ಕರ್
ನಲ್ಮೆಯ ಲೇಖಕಿ: ಸಾ.ರಾ.ಅಬೂಬಕ್ಕರ್
ನಲ್ಮೆಯ ಲೇಖಕಿ
ನಿಮಗಿದೊ ನಮನ
ನಿಮ್ಮಯ ಕನ್ನಡ ಕುಡಿಗಳ
ನೋವಿನ ನಮನ
ಕನ್ನಡ ನಾಡಿನ ಗಡಿಯಲಿ ಜನಿಸಿ
ಕನ್ನಡ ಭಾಷೆಯ ಉಳಿಸಿ,ಬೆಳೆಸಿ
ನಮ್ಮಯ ಮನದಲಿ ಅಕ್ಷರ ಜ್ಞಾನವ ಉಕ್ಕಿಸಿ
ಕಣ್ಮರೆಯಾದೆ ನಲ್ಮೆಯ ಲೇಖಕಿ
ಅರ್ಧರಾತ್ರಿಯಲಿ ಹುಟ್ಟಿದ ಕೂಸಾಗಿ
ಸಾಹಿತ್ಯ ಪಯಣವ ಮಾಡುವ ಹಾದಿಯಲಿ ಸಾಗಿ
ಚಂದ್ರಗಿರಿಯ ತೀರದಲಿ ಕುಳಿತ ಸಹನಾ ಮೂರ್ತಿಯು ನಲ್ಮೆಯ ಲೇಖಕಿ ನೀವು
ಕದನ ವಿರಾಮವ ಬಯಸಿದ ನೀನು
ಸುಳಿಯಲ್ಲಿ ಸಿಕ್ಕವರು ವಿಲಿವಿಲಿ
ಒದ್ದಾಡುತ್ತಿರಲು
ತಳ ಒಡೆದ ದೋಣಿಯಲಿ ದಡವ ಮುಟ್ಟಿಸಿ
ಮರುಜೀವ ನೀಡಿದ ನಲ್ಮೆಯ ಲೇಖಕಿ ನೀವು
ಕರ್ನಾಟಕದ ಸಂಸ್ಕೃತಿಯ
ಚಿಂತನೆ ಮೂಡಿಸಿದ ಚಿಂತಕಿ
ಕನ್ನಡಿಗರೆಲ್ಲರು ವಜ್ರಗಳೆಂಬ
ಭಾವನೆ ತೋರಿದ ಸಾಧಕಿ ನಮ್ಮಯ ನಲ್ಮೆಯ ಲೇಖಕಿ ನೀವು
ಕನ್ನಡ ನಾಡಿನ ನಕ್ಷತ್ರ ಜಾರಿತು
ನಿಮ್ಮಯ ಸಾಹಿತ್ಯ ಅಮರ
ನಿಮ್ಮಯ ಆತ್ಮಕೆ ಶಾಂತಿಯ ಕೋರುತ ಮತ್ತೆ ನಮ್ಮಯ ನಾಡಲೆ
ಮರುಹುಟ್ಟು ಸಿಗಲೆಂದು ಕೋರುವೆವು.