STORYMIRROR

Vijaya Bharathi

Classics

2  

Vijaya Bharathi

Classics

ಜೀವನ ಕಾವ್ಯ

ಜೀವನ ಕಾವ್ಯ

1 min
148

ಮಾನವ ಜೀವನವೊಂದುಂ

ಮಹಾಕಾವ್ಯಂಗಡಾ

ಜೀವನ ಕಾವ್ಯದೊಳ್

ನವರಸಗಳ ಭಾವೋಲ್ಲಾಸಮಂ


ಯೌವನದೊಳು ಶೃಂಗಾರಂ

ಪ್ರೌಡದೊಳು ವೀರಾದ್ಭುತಗಳ್

ಜವ್ವನದ ಸಂಧ್ಯೆಯೊಳ್

ಇಣುಕುವುದು ಭಯಾನಕಂ


ಜರಾವ್ಯಾಧಿಯೊಳ್ ಕರುಣೆ

ಮುಪ್ಪಡರಿದ ಕಾಲದೊಳ್

ಸುಳಿವುದಾ ಭೀಭತ್ಸಂ

ದೇಹಾವಸಾನದೊಳ್

ಜೀವವಪ್ಪುದುಂ

ಶಾಂತ ರಸದೊಳ್


Rate this content
Log in

Similar kannada poem from Classics