STORYMIRROR

Gireesh pm Giree

Classics

3  

Gireesh pm Giree

Classics

ಅಮ್ಮ

ಅಮ್ಮ

1 min
216

ಅಮ್ಮ ನೀನು ನಕ್ಕರೆ ಬಾಯಿಗೆ ಸಕ್ಕರೆ

ಅಮ್ಮ ನಾನು ಅತ್ತರೆ ನಿನ್ನ ಕೈಗಳ ಅಕ್ಕರೆ

ನಾ ಭಯಗೊಂಡರೆ ನಿನ್ನ ಸೇರಗ ಆಸರೆ

ನಾ ಕನಸ್ಸ ಕಾಣಲು ನಿನ್ನ ಮಡಿಲ  ಆಸರೆ


ಗುಲಾಬಿ ಎಷ್ಟೇ ಮುಳ್ಳಿದ್ದರೂ ನಗುವುದು 

ನಿನಗೆ ಎಷ್ಟೇ ಕಷ್ಟ ನೋವಿದ್ದರೂ ಅದ ತೋರಿಸದು

ಹರಿವಳು ಗಂಗೆ ತುಂಗೆ ಯಮುನಾ ಕಾವೇರಿ ಮಂಗಳದಲ್ಲಿ

ಸಕಲವೂ ಕಂಡೆ ನಾ ನಿನ್ನ ಮೊಗವೆಂಬ ಮಂಟಪದಲ್ಲಿ


ಗುರಿಯನ್ನು ಹೇಳಿಕೊಟ್ಟ ಮೊದಲ ಗುರು

 ಜೀವನದಲ್ಲಿ ಕನಸ್ಸನ್ನು ಚಿಗುರಿಸಿದ ದೇವರು

ನೀನೇ ನನಗೆ ಉಸಿರಿಗೆ ಉಸಿರು

ಇರಲಿ ನಿನ್ನ ಮೊಗ ಎಂದೂ ಹಸಿರು


ಕಂಡೆ ನಿನ್ನಿಂದ ಜಗವೆಂಬ ಜ್ಯೋತಿಯ ದರ್ಶನ

ಪಡೆದೆ ನಿನ್ನಿಂದ ಅಮೂಲ್ಯ ಜೀವನ

ಆರಿಲ್ಲ ನೀ ಕೊಟ್ಟ ಸಿಹಿ ಚುಂಬನ

ಮರೆತಿಲ್ಲ ನೀ ಹೇಳಿಕೊಟ್ಟ ಹನಿಗವನ


ಕೈ ತುತ್ತು ಕೊಟ್ಟು ಮುತ್ತು ಕೊಡುವ ಮಾತೆ 

ಪದಗಳೇ ಸಾಲದು ನಿನ್ನ ಕುರಿತು ಬರೆಯಲು ಕವಿತೆ

ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವತೆ

ನೀ ಮಮತೆ ಎಂಬ ಕಾಂತಿಯುಳ್ಳ ಹಣತೆ


ನಾ ಸೋತ್ತರೆ ಗೆಲುವಿನ ಸೂತ್ರ ತಿಳಿಸಿದಿ

ನಾ ಅತ್ತರೆ ನಗುವಿನ ತಂತ್ರದಿಂದ ನಗಿಸಿದೆ 

ಭುಮಿಗೆ ಚಂದ್ರಮನ ಬೆಳಕೇ ತಂಪು 

ನನಗೆ ನಿನ್ನ ಮಾತೇ ಇಂಪು ಕಂಪು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics