STORYMIRROR

Gireesh pm Giree

Classics Inspirational Others

4  

Gireesh pm Giree

Classics Inspirational Others

ಜೈ ಹಿಂದ್

ಜೈ ಹಿಂದ್

1 min
211

ಭರತಖಂಡ ಕಂಡ ಕನಸು ನನಸಾದ ಸುದಿನ

ಕೆಚ್ಚೆದೆಯ ಹೋರಾಟಕ್ಕೆ ತ್ಯಾಗಕ್ಕೆ ಸಾಕ್ಷಿ ಈ ದಿನ

ಬಿಳಿ ಕುನ್ನಿಗಳ ಹೆಡೆಮುರಿ ಕಟ್ಟಿದ ಕಥೆಯೇ ಅಸಮಾನ್ಯ

ತ್ಯಾಗಿಗಳ ಮನದೊಳಗಿನ ದೇಶಪ್ರೇಮವೇ ಅನನ್ಯ


ಶಾಂತಿಯಿಂದ ಹುಟ್ಟಿಕೊಂಡ ಕ್ರಾಂತಿಯ ಕಿಡಿ

ಉತ್ತರದಿಂದ ಹಿಡಿದು ದೇಶ ಪ್ರೇಮ ದಕ್ಷಿಣದಲ್ಲೂ ಹರಡಿ

ನೆತ್ತರು ಕಣ್ಣೆದುರೇ ಹರಿದರು ಉಸಿರು ಕಣ್ಣೆದುರೇ ಹೋದರು ಬಿಡದ ಛಲ

ಐಕ್ಯತೆಯ ಮಂತ್ರ ಹೋರಾಟ ತಂತ್ರಕ್ಕೆ ಸಿಕ್ಕ ಫಲ ಸಫಲ 


ಗುಂಡಿಗೆ ಹೆದರದ ಗುಂಡಿಗೆ ಒಳಗಿನ ಆವೇಶ

ಕ್ಷಣ ಕ್ಷಣವು ಹೆಚ್ಚಿಸಲು ಬ್ರಿಟಿಷರ ವಿರುದ್ಧದ ದ್ವೇಷ

ಭಾರತೀಯರೆಲ್ಲರಲ್ಲೂ ಮೂಡಿತು ಸ್ವಾತಂತ್ರ್ಯಕ್ಕಾಗಿ ಕೂಗು

ಇದರೆದುರು ಮರೆಯಾಗಲೇ ಬೇಕಾಯಿತು ಆಂಗ್ಲರ ಅಟ್ಟಹಾಸದ ನಗು


ಭಯಪಡಿಸಿದವರ ಕಣ್ಣಲ್ಲಿ ಭಯದ ವಾತಾವರಣ

ಹೋರಾಟಗಾರರ ಹೋರಾಟದ ಶೌರ್ಯವೇ ಇದಕ್ಕೆ ಕಾರಣ

ಜೀವದ ಹಂಗು ತೊರೆದವರ ಬಗ್ಗೆ ಕಟ್ಟಲಾಗದು ವ್ಯಾಕರಣ

ಅನುದಿನ ಅವರನ್ನು ನೆನೆಯುವುದೇ ನಮಗೆ ಭೂಷಣ


Rate this content
Log in

Similar kannada poem from Classics