ಓ ಮಳೆಯೇ
ಓ ಮಳೆಯೇ


ಮಳೆಯ ಮಾರುತ ಮನವ ತಣಿಸಲು
ಕಳೆಯ ಕಟ್ಟಿ ಹಸಿರ ಸಿರಿಯ ಚೆಲಲ್ಲು
ಇಳೆಯ ಸೆಳೆಗೆ ಮನ ಹಗುರಾಗಲು
ಮುಂಗಾರಿನ ಚುರುಕು ಮನ ಹೆದರಿಸಲು
ಬಂದಿತು ಮಳೆ ತುಂಬಿತು ಹೊಳೆ
ವೃದ್ಧಿಯಾಯಿತು ಪ್ರಕೃತಿ ಇದೊಂದು ಕಳೆ
ಅಂಬರದಿಂದ ಚದುರಲು ಮುತ್ತಿನ ಹನಿಗಳು
ಸುಂದರವಾದವು ಬದುಕಿನ ಈ ಕ್ಷಣಗಳು
ಕಾಗದದ ದೋಣಿಯನ್ನು ಬಿಡುವ ಹೊತ್ತಾಗಿದೆ
ಕಳೆದ ನೆನಪುಗಳು ಮನದೀ ಹಾಸು ಹೊಕ್ಕಾಗಿದೆ
ಗುಡುಗಿನ ಸದ್ದು ಕೇಳುವುದದು ಸುಡು ಮದ್ದಿನ ತರ
ಮಿಂಚಿನ ಸಂಚಲನ ಓಡುವುದು ಹದ್ದಿನ ತರ