STORYMIRROR

Gireesh pm Giree

Abstract Children Stories Classics

4  

Gireesh pm Giree

Abstract Children Stories Classics

ಚಳಿರಾಯ

ಚಳಿರಾಯ

1 min
20

ತಂಪೆರೆಯುವ ಚಳಿಯ ಆಲಿಂಗನಕ್ಕೆ ಮರುಳಾದೆ

ಇಬ್ಬನಿಯ ಹನಿಗಳ ಮುತ್ತಿನ ಮಾಲೆಗೆ ಮರುಳಾದೆ

ಸೂರ್ಯನ ಕಿರಣಕ್ಕೆ ಮಂಜು ಕರಗಿ ನೀರಾಗಿ

ತಣ್ಣನೆಯ ಮಧುರ ಮಾರುತ ಬೀಸಿ ಜೋರಾಗಿ


ನಡುಗುವ ದೇಹಕೆ ಚಹಾ ತಂದಿತು ಹೊಸ ಉಲ್ಲಾಸ

ಕಟಕಟಿಸುವ ಹಲ್ಲಿಗೆ ಸಿಕ್ಕಿತು ಸಲ್ಪ ಆಶ್ವಾಸ ಆಶ್ವಾಸ

ಇರುಳು ಹಾಸು ಹೊಕ್ಕಂತೆ ಚಳಿರಾಯನ ಆಗಮನ

ಸೂರ್ಯನ ಕಿರಣಗಳಿಗೆ ತವಕಿಸುವುದು ನನ್ನ ಮನ


ಪ್ರಕೃತಿಯ ಮಡಿಲ ವಿಸ್ಮಯವೇ ರೋಮಾಂಚನ

ಪ್ರತಿ ನಿಮಿಷವೂ ತಲ್ಲಣ, ಪರಿಸರವೇ ಇದ್ಕೆ ಕಾರಣ

ಋತುವಿನ ಸಂಚಾರಕ್ಕೆ ಕಾಲದ ಉತ್ತರ

ಉತ್ತರಕ್ಕೆ ಧರೆಯಲ್ಲಿ ಮೂಡುವುದು ಚಿತ್ತಾರ 


Rate this content
Log in

Similar kannada poem from Abstract