ದುರಿತ ನಿವಾರಿಣಿ
ದುರಿತ ನಿವಾರಿಣಿ
1 min
632
ದುರಿತಗಳ ಕಳೆಯಿಸಿ
ಭಯವನು ತೊಲಗಿಸಿ
ವರಗಳ ಕರುಣಿಸಿ
ಅಭಯವ ತೋರುವ
ದುರಿತ ನಿವಾರಿಣಿ
ದುರ್ಗಾ ದೇವಿಯೇ
ಶರಣು ಶರಣು
ನವರಾತ್ರಿ ಹಬ್ಬದೊಳು
ನವಧಾತ್ರಿ ವೇಷದೊಳು
ಆಶ್ವಯುಜ ಅಷ್ಟಮಿಯಲಿ
ನೀನಿಳೆಗೆ ಇಳಿಯುತಾ
ಭಕುತರಾ ಪೊರೆಯುವ
ದುರ್ಗಾ ದೇವಿಯೇ
ಶರಣು ಶರಣು
ನಿನ್ನಯ ಪೂಜೆಯ
ಭಕುತಿಯೊಳು ಮಾಡುವ
ನಿನ್ನಯಾ ಭಕುತರ
ಬಿಡದೇ ಪೊರೆಯುವ
ಕರುಣಾ ಕಟಾಕ್ಷಿ
ದುರ್ಗಾ ದೇವಿಯೇ
ಶರಣು ಶರಣು
ನಿನ್ನನೇ ನಂಬಿದ
ಭಕುತರಾ ಕಷ್ಟಗಳ
ಖಡ್ಗದಿ ಝಳಪಿಸುತ
ಹೊಡೆದೋಡಿಸುವ
ಭವಭಯ ನಿವಾರಿಣಿ
ದುರ್ಗಾ ದೇವಿಯೇ
ಶರಣು ಶರಣು