ಅರಸುವಿಕೆ
ಅರಸುವಿಕೆ
ಕಳೆಯುತಿಹುದು ವರುಷಗಳು
ಬಳಲುತಿಹುದು ಈ ಶರೀರ
ಅಳಿದು ಹೋಗೆ ಈ ದೇಹ
ಬಾಳ ಪಯಣ ಮುಗಿವುದಾಗ
ಹುಟ್ಟಿನಿಂದ ಸಾವಿನ ತನಕ
ಹೊಟ್ಟೆ ಬಟ್ಟೆ ಹಟ್ಟಿ ಗಳಿಗಾಗಿ
ಪಟ್ಟು ಬಿಡದ ಹೋರಾಟ
ಕಟ್ಟೆ ಕಡೆಗೆ ಉಳಿವುದೇನು?
ಎಲ್ಲಿಂದ ಬಂದೆ ನಾ ಭುವಿಗೆ?
ಎಲ್ಲಿಗೆ ನನ್ನ ಮುಂದಿನ ಪಯಣ?
ಎಲ್ಲಿಹುದು ನಮ್ಮ ಶಾಶ್ವತ ತಾಣ?
ಎಲ್ಲಾ ಪ್ರಶ್ನೆಗಳ ಸುರಿಮಳೆ
ನನ್ನೊಳಗಿನ ನನಗಾಗಿ
ನಾನಾರೆಂಬ ಅರಿವಿಗಾಗಿ
ನನ್ನ ಅರಸುವಿಕೆ ಸಾಗಿಹುದು
ನಾನಿನ್ನೂ ಅರಿತಿಲ್ಲ ಆ ನಿತ್ಯ ಸತ್ಯ
ವಿಜಯಭಾರತೀ ಎ.ಎಸ್.
