ಎಲ್ಲಿ ಹುಡುಕಲಿ ನಿನ್ನ?
ಎಲ್ಲಿ ಹುಡುಕಲಿ ನಿನ್ನ?
ನನ್ನಿಂದ ದೂರಾದ
ನಿನ್ನ ಹುಡುಕಾಟ
ನಿರಂತರ ನಡೆದಿದೆ
ನೀನಿರದೆ ನನ್ನ ಮನ
ನೀರವವಾಗಿ ಹೋಗಿದೆ
ನನ್ನ ತನು ಬೇಯುತಿದೆ
ನಿನ್ನ ವಿರಹಾಗ್ನಿಯಲಿ
ನಿನಗರಿವಾಗದೆ ಈ ಸತ್ಯ?
ನಿನ್ನ ಹುಡುಕಾಟದಲಿ
ನಾ ಕಳೆದೆ ದಶಕಗಳನು
ನೀ ಸಿಗದೆ ನಾ ಬಳಲಿದೆ
ನನಗೆ ಅಗೋಚರವೆನಿಸಿಹ
ನಿನ್ನ ಹುಡುಕಾಟಕೆ
ನೀ ತೆರೆ ಎಳೆಯಬಾರದೆ?
ನನ್ನ ಬಾಳ ಸಂಗಾತಿ
ನೀನಿಗ ಎಲ್ಲಿರುವೆಯೋ?
ನಿನ್ನ ಎಲ್ಲಿ ಹುಡುಕಲಿ? .
ವಿಜಯಭಾರತೀ ಎ.ಎಸ್.
