STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಜೀವನ ಕಾವ್ಯ

ಜೀವನ ಕಾವ್ಯ

1 min
207

ಜೀವನ ಕಾವ್ಯ 


ಜೀವನ ಕಾವ್ಯದೊಳು 

ನವರಸಗಳ ಭಾವೋಲ್ಲಾಸ

ಯೌವ್ವನದೊಳು ಶೃಂಗಾರ 

ಪ್ರೌಢದೊಳು ವೀರಾದ್ಭುತಗಳು

ಜವ್ವನದ ಸಂಧ್ಯೆಯೊಳು 

ಇಣುಕುವವು ಭಯಾನಕ 

ಜರಾವ್ಯಾಧಿಯೊಳು ಕರುಣೆ 

ಮುಪ್ಪಡರಿದ ಕಾಲದೊಳು 

ಸುಳಿದಾಡುವವು ಭೀಭತ್ಸ

ದೇಹಾವಸಾನದೊಳು 

ಜೀವ ಮುಳುಗುವುದು 

ಶಾಂತರಸದೊಳು 

ಈ ಜೀವನ ವೆಂಬ 

ಮಹಾಕಾವ್ಯದೊಳು 

ಜೀವವೊಂದು ಪಾತ್ರಧಾರಿ 

ದೇವನವನು ಸೂತ್ರಧಾರಿ

ಜೀವನವೊಂದು ತೆರೆದ ಪುಸ್ತಕ 

ಮೊದಲ ಪುಟಕೂ 

ಕಡೆಯ ಪುಟಕೂ 

ನಡುವೆ ಎನಿತೋ ಅಂತರ  


ವಿಜಯಭಾರತೀ ಎ.ಎಸ್.


Rate this content
Log in

Similar kannada poem from Abstract