ನನ್ನೊಳಗಿನ ಗುಮ್ಮ
ನನ್ನೊಳಗಿನ ಗುಮ್ಮ
ಅಮ್ಮ ಕೇಳು ನನ್ನ ಅಳಲು
ಎನುತಿದೆ ನನ್ನ ಕೊಳಲು
ನೀನಲ್ಲದೆ ನನಗ್ಯಾರಿಲ್ಲ, ಇದ್ದಾಗ ಅರಿಲಿಲ್ಲ
ಹೋದಾಗ ಆರಿತಿರುವೆ ನಾ ನೀನೆ ನನಗೆಲ್ಲಾ ಅಮ್ಮ
ನಿನ್ನಂಗೆ ಅಪರಿಮಿತ ಪಿರೂತಿಯ ಕಾಣಲಿಲ್ಲ
ಯಾರಲ್ಲೂ ನಾ , ಇದು ದಿಟ, ಸುಳ್ಳಲ್ಲ ಕೇಳಮ್ಮ
ಮಕ್ಕಳು ಕಳ್ಳ ಸುಳ್ಳರೆ ಇರಲಿ, ನಿನ್ನ ಮಡಿಲು ಮೀಸಲು
ಅವರಿಗಾಗಿ, ಆದ್ರೆ ನಮಗೆ ಬರೀ ದುಡ್ಡಿನ ಅಮಲು ಅಲ್ಲವೇನಮ್ಮ
ಹೇ ದೇವನೇ ನೀ ಎಲ್ಲಾ ಕ
ಡೆ ಇರಲಾರದೆ ಕಳಿಸಿದೆ ನಮ್ಮಮ್ಮನ
ದುಃಖವನು ಬಳುವಳಿಯಾಗಿ ಕೊಟ್ಟು ಅಳಿಸಿದೆವು ನಾವು ಅವಳನ್ನ
ಅವಳು ಇನ್ನು ಮೇಲಾದರೂ ಖುಷಿಯಾಗಿ ಇರಬೇಕೆಂಬುದೇ ನನ್ನ ಅಳಲು
ಕೇಳಿತಾ ಭಗವಂತ ಎಂದು ತೊದಲು ನುಡಿಯಿತು ಮುದ್ದಿನ ಅಳಿಲು
ತಥಾಸ್ತು ಎಂದುಬಿಡು ನನ್ನ ಕನಸನು ನನಸು ಮಾಡು
ಇಲ್ಲದಿದ್ರೆ ನನ್ನ ಜೀವನವು ಆಗುವುದು ಬರುಡು
ನನ್ನೊಳಗಿನ ಅಮ್ಮ ಬಿಟ್ಟು ಬಿಡಲಾಗದ ಪ್ರೀತಿಯ ಗುಮ್ಮ
ಇದೇ ನನ್ನ ನಿನ್ನ ಅಮ್ಮನ ಪ್ರೀತಿಯ ಗುಮ್ಮ