ಉಪ್ಪಿಟ್ಟು
ಉಪ್ಪಿಟ್ಟು
ಉಪ್ಪಿಟ್ಟು ಇದರೊಳಗೆ ಎಲ್ಲ ತರಕಾರಿಗಳೂ ಫಿಟ್ಟು
ಹಾಕಿ ನೋಡಿ ಸಬ್ಬಸಿಗೆ ಒಂದು ಕಟ್ಟು...
ಜೊತೆಗೆ ಉಪ್ಪು, ಮೆಣಸಿನಕಾಯಿ, ನಿಂಬೆ ರುಚಿಗೆ ಬೇಕಷ್ಟು...
ಮರೆಯಬೇಡಿ ಕೊತ್ತಂಬರಿ, ಕರಿಬೇವು, ಕಾಯಿ ತುರಿ ಅರ್ಧ ಕಪ್ಪಷ್ಟು..
ಬಿಸಿ, ತಣ್ಣಗೆ, ಹೇಗಾದರೂ ತಿನ್ನಿ, ರುಚಿ ಮಾತ್ರ ಅಚ್ಚುಕಟ್ಟು!!!
ಅದಕ್ಕೆ ಉಪ್ಪಿಟ್ಟು ಕಂಡರೆ ನನಗಿಲ್ಲ ಸಿಟ್ಟು
ಯಾಕೆಂದರೆ ಅದನ್ನ ತಿಂದವನೇ ಬಲು ಫಿಟ್ಟು
ಇದೇ ನಮ್ಮ ನಿಮ್ಮೆಲ್ಲರ ದೀರ್ಘಾಯುಷ್ಯದ ಸೀಕ್ರೆಟ್ಟು!!!