ಪವಮಾನ
ಪವಮಾನ
ಹುರಳಿ ಕಾಯಿ ತಾನೆಷ್ಟು ಸಣ್ಣ ಎಂದು ಮನನೊಂದರೆ
ಕ್ಯಾರೆಟ್ ತಾನು ದಪ್ಪ ಎಂದು ಹಪಹಪಿಸಿತು...
ಆಲೂಗಡ್ಡೆಯು ನನ್ನನ್ನು ತಿಂದ್ರೆ ದಪ್ಪ ಆಗ್ತಾರ ಎಂದು ಕೇಳಿತು?
ಇತ್ತ ಈರುಳ್ಳಿ, ಮುಟ್ಟಿದರೆ ನನ್ನ ಎಲ್ಲರ ಕಣ್ಣಲ್ಲಿ ನೀರ್ಯಾಕೆ ಎಂದಿತು..
ಬೇಳೆಯೂ ತನ್ನ ಬೆಲೆ ಯಾಕೆ ಜಾಸ್ತಿ ಎಂದು ಕೇಳಿದರೆ..
ಅಕ್ಕಿ, ನೀನಿಲ್ಲದೆ ನಾ ಬರೀ ಸಪ್ಪೆ ಅಲ್ಲವೇ ಎಂದು ಪ್ರಶ್ನಿಸಿತು..
ಬಟಾಣಿಯು ಪುಟಿಯುತ್ತ ಓಡಿ ಬಂದು ನೀರಿನಲ್ಲಿ ಮುಳುಗಿತು ..
ನೀರಿಲ್ಲದೆ ನಾವ್ಯಾರೂ ಬದುಕಿರಲಾರೆವು ಎಂದವು
ನೀವಿಲ್ಲದೆ ನಾವು ಅಡುಗೆ ಮಾಡಲಾರೆವು ಎಂದ ಭಟ್ಟರು
ಎಲ್ಲರಿಗೂ ಸ್ನಾನ ಮಾಡಿಸಿ ಇತ್ತ ಅನ್ನಬೇಳೆಯನ್ನ ಬೇಯಲಿಟ್ಟರು
ತರಕಾರಿಗಳೆಲ್ಲವನ್ನು ಕೊಚ್ಚಿ ಈರುಳ್ಳಿಯನ್ನು ಒಗ್ಗರಣೆ ಮಾಡಿ
ಮಸಾಲೆಯನ್ನು ಅರೆದು, ಬಿಸಿಬೇಳೆಬಾತನ್ನು ಮಾಡಿದರೆ ...
ತರಕಾರಿಗಳು ಹೇಗೆ ತಾವು ಬೆಂದು ತಮ್ಮ ಜೀವನವನ್ನು
ಪಾವನವಾಗಿ ಮಾಡಿಕೊಂಡವೋ ಹಾಗೆಯೇ ನಾವ್ಯಾಕೆ ಪವಮಾನರಾಗಬಾರದು?