ಶ್ರಾವಣದ ಹೂವುಗಳು
ಶ್ರಾವಣದ ಹೂವುಗಳು


ಈ ಇಳೆಯ ಸಿರಿಮೈಗೆ
ಶ್ರಾವಣದ ಸಿಂಗಾರ
ಹೊಸ ಮಾಸದಲಿ
ಅಮಿತ ಸಂಭ್ರಮೋತ್ಸಾಹ
ಆಷಾಡದಲಿ ಮಿಂದು
ಬಸವಳಿದ ದೇಹಕ್ಕೆ
ಶ್ರಾವಣದ ಎಳೆಬಿಸಿಲು ಚೇತನೋಲ್ಲಾಸ !
ಮರಗಿಡಗಳೆಡೆಯಿಂದ ಬೀಸಿಬರುವ
ಸುಳಿಗಾಳಿಗೆಭರ್ರೆಂದು
ಉದುರುವವುಶ್ರಾವಣದ
ಹೂವುಗಳುಬಣ್ಣ ಬಣ್ಣಗಳದ್ದೇ
ಕಣ್ಣುಮುಚ್ಚಾಲೆಬಾನಂಗಳದ ನೆರಳು
ಬೆಳಕುಗಳಮೋಡಿಯಲಿ
ಮುಗಿಲಾಯ್ತುದಿನಮಣಿಯ ತೂಗುಯ್ಯಾಲೆ !
ಬೇಲಿಯಂಚಿನ ಗಿಡದಲ್ಲಿಘಮ್ಮೆಂದು
ಅರಳುವಪಾರಿಜಾತಕ್ಕೆ
ಬಣ್ಣದುಂಬುವವುಮೃಗಪಕ್ಷಿ
ಸಂಕುಲದಹರ್ಷ ದನಿ
ಸಡಗರವುಬಳುಕಿ ಹರಿಯುವ
ಝರಿಯ ಸೊಗಸುಮೆಲುಗಾಳಿಯಲಿ
ತೊನೆವತರುಲತೆಯ ಸೊಬಗು
ಕರ್ಮುಗಿಲ ಮರೆಯಿಂದರಾಶಿ
ರಾಶಿ ಉದುರುವವುಶ್ರಾವಣದ
ಹೂವುಗಳುಎಲೆ ಎಲೆಯ
ಎದೆಯಲ್ಲಿತುಂಬಿಹುದು
ಒಲವುಬಯಲುಗಳಿಗೆಲ್ಲಾ
ಸಿಹಿಮುತ್ತ ನೀಡುತ್ತಹೊಸ ಕಳೆಯ ತುಂಬುವವು !
ಈ ಬೆಡಗು , ಆ ಬಣ್ಣ ಸೊಗಸುಗಳ
ಮಿಲನಪ್ರಕೃತಿಯಾಗಿದೆ ನಲಿವ
ಚೆಲುವಿನುದ್ಯಾನಶ್ರಾವಣ
ಸ್ವಾಗತಿಸಿ ಮುದಗೊಂಡ
ತನುಮನಅರಳುವವು
ಬಾನಿನಲ್ಲಿಶ್ರಾವಣದ ಹೂವುಗಳು !