STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಶತಶೃಂಗದಲ್ಲೊಂದು ಸಂಜೆ

ಶತಶೃಂಗದಲ್ಲೊಂದು ಸಂಜೆ

1 min
378

..................................

ಕಡಲ ಅಂಚಿನಲ್ಲೊಂದು 

ಶತಶೃಂಗ ಪರ್ವತ 

ಸುತ್ತಲೂ ಹಸಿರಿನಿಂದಾವೃತವಾದ 

ಆಳೆತ್ತರಕ್ಕೆ ಬೆಳೆದ ಗಿಡಮರಗಳು 

ಪಶ್ಚಿಮದೆದುರಿನಲ್ಲಿ ಭೋರ್ಗೆರೆವ 

ಅರಬ್ಬೀ ಸಮುದ್ರದ ಅಲೆಗಳ

ಬಂಡೆಗಪ್ಪಳಿಸಿ ಚಿಮ್ಮುವ 

ನೀರ ಹನಿಗಳ ಮೇಲೆ 

ಸೂರ್ಯಾಸ್ತದ ಹೊಂಗಿರಣ ಬಿದ್ದು 

ಹೊಳೆವ ಹೊನ್ನಿನ ಕಲಶ 

ಶತಶೃಂಗದಲ್ಲಿ !


ಮರಳು ತಡಿಯಲ್ಲಿ 

ಸೂರ್ಯನ ಎಳೆ ಕಿರಣ

ರಂಗುರಂಗಿನೊಡನೆ ಚೆಲ್ಲಾಟವಾಡುತ್ತದೆ 

ನೀಲ ಬಾನಿನಲ್ಲಿ 

ರೆಕ್ಕೆಬಿಚ್ಚಿ ಹಾರುತ್ತಿದೆ ಹಕ್ಕಿಗಳು 

ಗೂಡು ಸೇರುವ ತವಕದಲ್ಲಿ 

ಇಳಿ ಸಂಜೆಯ ಬೆಳಕಲ್ಲಿ 


ತೇಲುತ್ತಾ ಸಾಗುತ್ತಿದೆ ದೋಣಿ 

ದೂರ ಕಡಲಲ್ಲಿ 

ನೂರೆಂಟು ಕನಸುಗಳ ಹೊತ್ತು 

ಸೂರ್ಯ ಕರಗಿ ನೀರಾದ 

ಸಂಜೆ ಹಾಡಲ್ಲಿ ಶತಶೃಂಗದಲ್ಲಿ 

 


Rate this content
Log in

Similar kannada poem from Classics