STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಒಂದು ನಿವೇದನೆ .....

ಒಂದು ನಿವೇದನೆ .....

1 min
259

ನಿನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡ

ನೋವಿನ ಮೂಟೆಯನ್ನೊಮ್ಮೆ ಬಿಚ್ಚಿಬಿಡು

 ಅಂಗಳದ ತುಂಬಾ ಚದುರಿಬಿದ್ದ

ಹೂ ಹೆಕ್ಕುವಂತೆ

ಒಂದಿಷ್ಟು ಆರಿಸಿಕೊಳ್ಳುತ್ತೇನೆ


ನಗುವ ಮುಖದ ಹಿಂದಿರುವ

ನೋವಿನ ಗೆರೆಗಳಲ್ಲಿ

ಒಂದು ಚೂರು ನೋವಾದರೂ

ಕಡಿಮೆ ಆಗಲಿ

ಹತ್ತಿ ಉರಿಯುವ ಹೃದಯದೊಳಗೆ

ಪ್ರೀತಿಯ ಬೀಜ ಮೊಳಕೆಯೊಡೆದು

ಹಂಚುವ ನಿನ್ನ ಪರಿ ಅನನ್ಯ !

ಅದರಲ್ಲೊಂದು ಪಾಲು ಪಡೆದ

ನಾನೇ ಧನ್ಯ !


ನಿನ್ನ ಫಳ ಫಳ ಹೊಳೆಯುವ ಕಣ್ಣುಗಳಲಿ

ಮಿನುಗುವ ನಕ್ಷತ್ರಗಳನು ಎಣಿಸಲು

ನಾ ಬಯಸುವುದಿಲ್ಲ

ಆದರೆ , ನೋವಿನ ಮಧ್ಯದಲ್ಲೊಂದು

ಕೋರೈಸುವ ಮಿಂಚಿನ ಬೆಳಕನ್ನು

ಕಾಣಲು ತವಕಿಸುತ್ತೇನೆ

ಹೃದಯದಾಂತರ್ಯದಿಂದ ಬರುವ

ಭಾವನೆಗಳಿಗೆ ಬೇಲಿಕಟ್ಟಿ

ನಾಳೆಯ ಕನಸುಗಳಿಗೆ

ತಡೆಯೊಡ್ಡಿ ಸಾಯಿಸಬೇಡ


ಭಾವನೆಗಳ ಭಾರ ಹೊರಲು

ಕನಸುಗಳು ಚೂರಾಗದಂತೆ

ಜೋಪಾನ ಮಾಡಲು ನಾನಿದ್ದೇನೆ 

ನಿನ್ನ ಪುಟ್ಟ ಹೃದಯವನು

ನನಗೆ ಕೊಟ್ಟುಬಿಡು

ಅದನ್ನು ಎಂದಿಗೂ ನೋವಾಗದಂತೆ ಕಾಪಾಡುತ್ತೇನೆ 



Rate this content
Log in

Similar kannada poem from Classics