STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಕೆಂಪು ಲಂಗದ ಪುಟ್ಟ ಹುಡುಗಿ   ...........

ಕೆಂಪು ಲಂಗದ ಪುಟ್ಟ ಹುಡುಗಿ   ...........

1 min
373


ಚುಮು ಚುಮು ಮುಂಜಾವಿನಲಿ 

ಅರಳಿ ನಿಂತ ಹೂಗಳ ಮೇಲೆ ಬಿದ್ದು 

ಮುತ್ತಂತೆ ಹೊಳೆಯುವ ಮಂಜುಹನಿ 

ನಕ್ಕು ನಲಿಯುವಾಗ 

ಬಿರಿದ ಹೂದಳಗಳ ಮೇಲೆ 

ಬಣ್ಣ ಬಣ್ಣದ ಚಿಟ್ಟೆಗಳು 

ಬಿಟ್ಟು ಬಿಟ್ಟು ಹಾರುವಾಗ 

ಕೆಂಪು ಲಂಗದ ಪುಟ್ಟ ಹುಡುಗಿ 

ತನ್ನ ಪುಟ್ಟ ಕೈಗಳಿಂದ 

ಚಿಟ್ಟೆ ಹಿಡಿಯಲು ಕಾಯುತ್ತಲೇ ಇದ್ದಾಳೆ !


ಹೂವಿಂದ ಹೂವಿಗೆ , ಗಿಡದಿಂದ ಗಿಡಕ್ಕೆ 

ಹುಲ್ಲು ಹುಲ್ಲುಗಳ ಮೇಲೆ 

ಎಲ್ಲೆಂದರಲ್ಲಿ ಹಾರುವ ಚಿಟ್ಟೆಗಳು......

ಬೆಳಗಿನ ಬಟ್ಟಲು ಕಣ್ಣುಗಳು 

ಸೂರ್ಯನ ಕಿರಣಕ್ಕೆ ಹೊಳೆವ 

ಹೂದಳಗಳು ಮುದುಡಿ ಉದುರಿ 

ಭೂಮಿಗೆ ಬೀಳುವ ಮೊದಲೇ 

ಕಾಯುತ್ತಲೇ ಇದ್ದಾಳೆ 

ಕೆಂಪು ಲಂಗದ ಪುಟ್ಟ ಹುಡುಗಿ !


ಅತ್ತಿತ್ತ ಹಾರುವ ಬಣ್ಣದ ಚಿಟ್ಟೆಗಳು 

ಮುದುಡಿ , ಗಟ್ಟಿಯಾಗಿ ಹೂದಳದ

ಮೇಲೆ ಕೂರುವ ಮೊದಲೇ 

ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ 

ತನ್ನ ಪುಟ್ಟ ಬೆರಳುಗಳಿಂದ 

ಚಿಟ್ಟೆ ಹಿಡಿಯುವ ಆಸೆಯಿಂದ ಹೋಗುತ್ತಾಳೆ !

ಹತ್ತಿರ ಬರುತ್ತಲೇ ಅದು 

ಅಲ್ಲಿ ...ಇಲ್ಲಿ ....ಎಲ್ಲೆಂದರಲ್ಲಿ ....

ಹಾರುತ್ತ ತಪ್ಪಿಸಿಕೊಳ್ಳುತ್ತಿತ್ತು 

ಮತ್ತೆ ಕಾಯುತ್ತಲೇ ಇದ್ದಾಳೆ 

ಕೆಂಪು ಲಂಗದ ಪುಟ್ಟ ಹುಡುಗಿ !


ಹೀಗೆ ಮುಂಜಾನೆ ಬೆಳಗಿನಲ್ಲಿ 

ಚಿಟ್ಟೆಯೊಂದು ರಂಗೋಲಿಯಾಗಿ 

ಚಿಟ್ಟೆ ಹಿಡಿವ ಪುಟ್ಟ ಹುಡುಗಿಯೂ 

ಪುಟ್ಟ ಚಿಟ್ಟೆಯಾಗಿ 

ಆ ಬಣ್ಣದ ಚಿಟ್ಟೆಯಲ್ಲೊಂದು ಚಿಟ್ಟೆಯಾಗಿ 

ಹಾರುತ್ತಲೇ ಇದ್ದಾಳೆ 

ಹೂವಿನಿಂದ ಹೂವಿಗೆ .....

ಆ ಚಿಟ್ಟೆ ಹಿಡಿವ ಕೆಂಪು ಲಂಗದ 

ಪುಟ್ಟ ಹುಡುಗಿ !!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics