STORYMIRROR

Prabhakar Tamragouri

Romance Inspirational Others

4  

Prabhakar Tamragouri

Romance Inspirational Others

ಗಂಗಾವಳಿ ನದಿ  .....................

ಗಂಗಾವಳಿ ನದಿ  .....................

1 min
358


ಹೌದು , ಅವಳೇ ಗಂಗಾವಳಿ .....

ಸ್ವಚ್ಛ ನೀರಿನಂತೆ ತುಂಬಿ ಹರಿವ ನದಿ 

ತೆರೆತೆರೆಯಲಿ ತೆರೆಯುವವಳು 

ಗದ್ದೆಯ ಮೇಲೆ 

ಎಲ್ಲೆ ಮೀರಿ ಹರಿಯುವವಳು 

ತನಗೆ ತಾನೇ ಮೆರೆಯುವವಳು 

ಎಂದೆಂದೂ ಬತ್ತದವಳು !

ವೇಗ , ರಭಸದಿಂದ 

ಎಗ್ಗಿಲ್ಲದೇ ನುಗ್ಗುವವಳು 

ಎತ್ತರೆತ್ತರಿಸಿ ಬರುವವಳು 

ಮೂಲದಲ್ಲೇ ಸೆಳೆಯುವವಳು 

ಮೈಯ ಕೊಳೆಯ ತೊಳೆದು 

ಜೀವ ರಸವ ಉಣಿಸುವವಳು !


ಎಲ್ಲೋ ಧುಮುಕಿ , ಇಲ್ಲಿ ನುಗ್ಗಿ 

ರಭಸದಿಂದ ಹರಿಯುವವಳು 

ಹಸಿರು ಗಿಡಗಳ ಮಧ್ಯೆ 

ಉಬ್ಬು ತಗ್ಗುಗಳಲ್ಲಿ ಸಿಡಿದು 

ಜುಳು ಜುಳು ಹರಿಯುವವಳು 

ಮನ ಮೋಹಕ ಮಾಟದಲ್ಲಿ 

ಕಣ್ಣು ತಂಪುಗೊಳಿಸುವವಳು 

ಮೈಗೆ ಚುಮು ಚುಮು ಸಿಡಿಸಿ 

ಪುಳಕಗೊಳಿಸುವವಳು 

ನೊರೆ ನೊರೆಯಾಗಿ ಹರಿವ 

ತನ್ನ ಚೆಲುವಿನಲ್ಲಿ 

ಮನಕೆ ಹುಚ್ಚು ಹಿಡಿಸುವವಳು !


ನೀ ಹರಿವ ಏರು ದಂಡೆಯಲ್ಲಿ 

ಹಕ್ಕಿಗಳ ಉಲಿವು

ಎಂಥ ಹೂವು , ಏನು ಚೆಲುವು !

ನೀ ಹರಿವ ಹಸಿರು ದಾರಿಯಲ್ಲಿ 

ಸೌಂದರ್ಯವು ಮಡುಗಟ್ಟಿದೆ 

ಸಂತಸವೇ ಹೊರಹೊಮ್ಮಿದೆ !!

ನಿನ್ನ ಕಾಲಬುಡದಿ ನಾನು 

ಮನದ ಒಳಗೆ ಹೊರಳುವೆ 

ಎದೆಯ ಮುಗುಳುನರಳಿಸುತ್ತಾ 

ನನಗೆ ನಾನೇ ನಲಿವೆ !



Rate this content
Log in

Similar kannada poem from Romance