*ಮನದರಸಿಯ ಪ್ರೇಮಪತ್ರ*
*ಮನದರಸಿಯ ಪ್ರೇಮಪತ್ರ*
ಇದ್ದುಬಿಡು
ನನ್ನೆದೆಯ ಗೂಡಿನಲಿ
ಕನಸು ಕಾಣುವ ಮನೆಯಲಿ
ಎನ್ನ ಮನದರಸಿಯ ರೂಪದಲಿ!!
ಕೊಟ್ಟುಬಿಡು
ಪ್ರೀತಿ ಅರ್ಥಕ್ಕೆ ಮುನ್ನುಡಿ
ಸ್ಪರ್ಶಿಸಿ ಮೆಲ್ಲಗೆ ಸವಿ ಗನ್ನಡಿ
ನಿನ್ನ ಮುಗುಳ್ನಗು ಮಾಡಿರುವ ಮೋಡಿ!!
ನೀನೆಂದರೆ
ಕೋಪಿಸಿಕೊಂಡರೂ ನಂಗಿಷ್ಟ
ಕೊನೆಯಿಲ್ಲದ ಪ್ರೀತಿಯ ಕಂಠಮಟ್ಟ
ಆಗಸದ ಆಚೆಗಿರುವಂತ ಎಲ್ಲೆಗೂ ಇಷ್ಟ!!
ನೀನಿರುವೆಯಾ
ನನ್ನ ಹುಚ್ಚಾಟ ಸಹಿಸುತ್ತಾ
ಕೊನೆತನಕ ಹೀಗೆ ಪ್ರೀತಿಸುತ್ತಾ
ಸ್ವಪ್ನದಲ್ಲೂ ಬಿಡದೇ ನನ್ನ ಮುದ್ದಿಸುತ್ತಾ!!
ಇರುವೆನಾ
ನನ್ನ ಗುಲಾಬಿಯಂತ ಚೆಲುವೆಗಾಗಿ
ಮುಗ್ದ ಮನಸಿನ ಬೆಡಗಿನ ಕಣ್ಮಣಿಗಾಗಿ
ಧರೆಗಿಳಿದಿರುವ ಶ್ರಾವ್ಯ ಚಂದನದ ಬೊಂಬೆಗಾಗಿ!!
ಕಳೆದುಹೋಗುವ
ನನ್ನವನ ಪ್ರೀತಿಯ ಅಪ್ಪುಗೆಯಲ್ಲೋ
ಪ್ರೇಮವೆಂಬ ಅರಮನೆಯ ಅರಸುತ್ತಲೋ
ನೂರಾರು ಜನ್ಮ ಕಳೆದರು ಪ್ರೇಮಗೀತೆ ಹಾಡುತ್ತಲೋ!!

