ಕಥೆಯೋ.. ವ್ಯಥೆಯೋ..
ಕಥೆಯೋ.. ವ್ಯಥೆಯೋ..
"ಅನುದ್ವಿಗ್ನ" ಬಗ್ಗೆ ಒಂದೆರಡು ಸಾಲು
ಮರೆತ ಭಾವನೆಗಳ ಮರೆಯಲ್ಲಿ
ಸಾಗಿದೆ ಅವನ ಹೊಸ ಪಯಣ
ಅವನು ಮರೆತ ನೆನಪುಗಳಲ್ಲೇ
ಸಾಗುತಿದೆ ಅವಳ ಜೀವನ..
ಮನನ್-ಮಾನಿನಿ ಜೀವನವೇ
ಒಂದು ದುರಂತ ಕಾವ್ಯ..
ತನ್ನ ಅಸ್ತಿತ್ವ ಮರೆತ ಪತಿಯ ನೆನಪಲ್ಲೇ
ಬದುಕೋ ನಿರ್ಧಾರದ ಹಿಂದಿನ ಮೌನವೇ ದಿವ್ಯ
ಮೌನ ಸಂಗ್ರಾಮದಲಿ ಸೋತವಳ ಬದುಕು
ಸಾಗುತಿದೆ ಇಂದು ಸನ್ಯಾಸಿನಿ ಆಗುವತ್ತ..
ಕನಸು ಮರೆತ ಕಂಗಳಲ್ಲೇ
ಜೀವನದ ವಸಂತ ಕಳೆಯುವತ್ತ..
ಮನನ್ ಮಾನಿನಿ ಪ್ರೀತಿಗೆ
ಆಗಿದೆ ಸಾಕ್ಷಿ ಭಾವಸೆಲೆ
ವಿಳಾಸವಿಲ್ಲದ ಜೀವಕ್ಕೊಂದು ನೀಡಿದೆ
ಓದುಗ ಮಿತ್ರರ ಮನದಲ್ಲೊಂದು ನೆಲೆ
ನಾನೇ ಬರೆದ ಕಥನ..
ಆದರೂ ಪ್ರತಿಬಾರಿ ಓದುವಾಗಲೂ
ಮನದಲ್ಲೊಂದು ಹೊಸ ಭಾವ..

