ಒಲವಧಾರೆ
ಒಲವಧಾರೆ
ಊರಮುಂದಿನ ಅಗಸಿಯಾಗ್ ದಾರಿ ಕಾಯ್ಕೊಂಡು
ಕುಂತಿದ್ನಿ ಒಮ್ಮೆಯಾದ್ರು ನನ್ನ ತಿರುಗಿ ನೋಡ್ಕೊಂಡು
ನೀ ಹೋಗಬಾರದೇ ಗೆಳತೀ ನನ್ನ ಕರಕೊಂಡು
ಸಿಂಗಾರ ಮಾಡ್ಕೊಂಡ್ ತಿರಗತಿದ್ದಿ, ವೈಯಾರ ಮಾಡ್ಕೊಂಡು
ಹೋಗತಿದ್ದಿ ಮಲ್ಲಿಗಿ ಮೊಗ್ಗಿನ ಮಾಲಿ ಕಟಗೊಂಡು!!
ದಾರಿಯಾಗ ಸುಮ್ನ್ ಹೋಗುತಿದ್ದಿ ಕಣ್ಣ ತಿರಿಗಿಸದೇ
ಎದೆಯ ತುಂಬಾ ನಿನ್ನಾ ಪ್ರತಿಬಿಂಬವೇ ತುಂಬಿಕೊಂಡಿದೆ
ನನ್ನ ಮೊದಲ ಪ್ರೀತಿ ನೀನು ಕಣ್ಣಮುಚ್ಚಿ ಒಪ್ಪಬಾರದೇ
ಬೀದಿ ನೋಡ್ಕೊಂಡು ಕುಂತಿನಿ ಉತ್ತರ ನೀಡಬಾರದೇ
ಬಿಂಕ ಬಿಗುಮಾನವ ಬಿಟ್ಟು ಸಮ್ಮತಿ ಕೊಡಬಾರದೇ!!
ಕೇರಿ ಪೀರಿ ಸುತ್ತುಕೊಂಡು, ಸಂತ್ಯಾನ ಸೀರೆ ತೆಕ್ಕೊಂಡು
ಧಾರೆ ಸೀರೆ ನೀಡಲೆಂದು ಅವ್ವ ಅಪ್ಪನ ಕರಕೊಂಡು
ಹೊಂಟಿವ್ನಿ ಕೇರಿಗೆಲ್ಲ ಊಟ ಹಾಕಿಸ್ತೀನಿ ನಿನ್ನಾ ಕಟಗೊಂಡು
ತವರಿನಿಂದ ತೇರಿನ್ಯಾಗ ರಾಣಿಯಂಗ ಹೊತ್ತುಕೊಂಡು
ನಾಡಿಗೆಲ್ಲ ನನ್ನಾ ಪ್ರೀತಿ ಹೆಂಡ್ತಿ ಅಂತಾ ಹೇಳಿಕೊಂಡು!!
ಸ್ವರ್ಗದಾಗ ಸ್ವಪ್ನ ತಾಣ ನೋಡಲೆರಡು ಕಂಗಳು ಸಾಲದು
ವಜ್ರದೊಡವೆ ಮುತ್ತಿನ ಮೂಗುತಿ ನಿಂಗೆ ನೀಡಬೇಕೆಂದು
ಸಾಲ ಮಾಡಿ ತಂದು ಇಟ್ಟಿವ್ನಿ ಪಟ್ಟದರಸಿಗೆ ಕೊಡಲೆಂದು
ಒಲ್ಲ ಎಂದು ಒದೆಯಬೇಡ ಕಲ್ಲಮನಸಿನಿಂದ ನನ್ನೆಂದು
ಕಾಡಿಸ್ಬೇಡ ಪೀಡಿಸ್ಬೇಡ ಮೆಚ್ಚಿ ಮದುವೆಯಾಗೇ ನನ್ನಿಂದು!!

