ಪರಿಸರ ಉಳಿಸು ಮರ ಬೆಳೆಸು*
ಪರಿಸರ ಉಳಿಸು ಮರ ಬೆಳೆಸು*
ಮುಂದಿನ ಪೀಳಿಗೆ ಚೆಂದಾಗಿ ಇರಬೇಕು
ಕಂದಾ ನೀ ಹಚ್ಚು ಒಂದು ಸಸಿಯನ್ನು
ಮರವಾಗಿ ನಿನ್ನೊಂದಿಗೆ ಬೆಳೆಯಲಿ ಸಸಿಯು
ನೆರಳು ನೀಡಲಿ ನಿನಗೂ ನಿಮ್ಮವರಿಗೂ ಮುಂದು
ಮುಂಗಾರು ಮಳೆಯಿಂದ ತಂಪಾಯಿತು ಈ ಧರೆ
ನೀ ಹಚ್ಚೋ ಸಸಿಯಿಂದ ಉಸಿರಾಡಲಿ ಈ ಜಗವೇ
ಪಶು ಪಕ್ಷಿಗಳಿಗೆಲ್ಲ ಆಶ್ರಯತಾಣವಾಗಿ ಬೆಳೆಯಲಿ
ಮುಂದಿನ ಪೀಳಿಗೆಯ ಮಂದಿ ನಿನ್ನ ಅನುಸರಿಸಲಿ
ಕೆಸರಾದ ನೆಲ ಅಗೆದು ಉಸಿರಾದ ಹಸಿರು ಹಚ್ಚು
ಪ್ರತಿ ವರುಷವು ನೆಡು ನೀನು ಪುಟ್ಟದಾದ ಸಸಿಯು
ಸಮೃದ್ಧಿಗೊಳ್ಳಲಿ ಸರ್ವರನು ಕಾಯಲಿ ವನಸಿರಿಯು
ಹಚ್ಚ ಹಸಿರಿನಿಂದ ಕಂಗೊಳಿಸಲಿ ತುಂಬಿದ ಮನೆಯು
ಶಾಲೆಗೆ ಹೋಗುವ ಮುನ್ನ ನೀರುಣಿಸಿ ಹೋಗು ಕೂಸೆ
ಸಮಯಕೆ ಸರಿಯಾಗಿ ಗೊಬ್ಬರ ಹಾಕಿ ಸಸಿಯ ಬೆಳೆಸು
ನಿನ್ನ ಕನಸಿನ ಹಾಗೇ ಎತ್ತರವಾಗಿ ಬೆಳೆಯಲಿ ಸಸಿಯು
ಅದರ ನೆರಳಲ್ಲಿರುವುದು ನಮ್ಮ ಬಾಳು ಸದಾ ಹಸಿರು
✍️ ಸೂಗಮ್ಮ ಡಿ ಪಾಟೀಲ್
ಉತ್ನಾಳ್
