ಅಸ್ಥಿತ್ವ
ಅಸ್ಥಿತ್ವ
ಎಲ್ಲಿಯವರೆಗೆ ಈ ಅಸ್ಥಿತ್ವ
ನಾನು ನನ್ನವರು ನನ್ನವರಿಗಾಗಿ
ಕೇಳು ಮಂಕೇ.......
ಅವರಾರು ಇಲ್ಲ ಇಲ್ಲಿ ನಿನಗಾಗಿ
ಏತಕಾಗಿ ಮೆಚ್ಚುಗೆಯ ಆಟ
ಮೆಚ್ಚಿಕೊಂಡವರಿಗೆ ಬೇಕಿಲ್ಲ ನಿನ್ನ ಕೂಟ
ಎಲ್ಲಾ ಬರೀ ದೊಂಬರಾಟ.....
ಕೊಟ್ಟು ಕೊಳ್ಳದಿರು ನೀ ನಿನಗೆ
ಸಹಿಸಲಾಗದ ಕಾಟ.......
ಕೇಳು ಮಂಕೇ
ನಿನ್ನಯ ಜೊತೆ ಬರುವರು
ನಾವು ನಿಮ್ಮವರೆಂದು
ಕಾಲದ ಜೊತೆಗೆ ತಾ ಬದಲಾಗಿ
ಕೇಳದೇ ಇರುವರೇ ನೀ ಯಾರೆಂದು...
ನೀ ಕೊರಗಿ ಕೊರಗಿ
ಕೊನೆ ಉಸಿರೆಳೆದಾಗ.....
ಬರುವರು ನಿನ್ನವರು......
ದೂರದಿ ನಿಂತು ಹರಿಸುವರು ಕಣ್ಣೀರನು
ಕಳೆದರೆ ದಿನ ಎರಡು
ಮರೆಯದೆ ಇರರು ನಿನ್ನನು......
ಏ ಮಂಕೇ..ಹೇಳು ನೀ
ಯಾರಿಗಾಗಿ....ಏತಕಾಗಿ......
ಬದುಕು ಮೊದಲು..ನೀ..ನಿನಗಾಗಿ
ಮರೆಯದಿರು ಮಂಕೇ....
ಕಾಲಚಕ್ರವಿದು ಉರುಳಲೇ ಬೇಕು....
ನೀ ನಿನಗಾಗಿ ಬದುಕಲೇ ಬೇಕು......!!!!!