ವಿದ್ಯುತ್ ಕಡಿತ
ವಿದ್ಯುತ್ ಕಡಿತ


ಚುಮಣಿಗಾಗಿ ಹುಡುಕಿದೆ ಇಡೀ ಮನೆ
ಅನಿಸಿತು ಇದೆಂತಹ ಅವಲಂಬನೆ
ವಿದ್ಯುತ್ ಇಲ್ಲದಿದ್ದರೆ ಆಗುವುದು ಅಡಚಣೆ
ಹೇಗಿರಬಹುದು ಅಭಿವೃದ್ಧಿಯ ಕೊನೆ||
ತಾಂತ್ರಿಕ ದೋಷ ವಾಗುವುದು ಸಹಜ
ನಮ್ಮ ಪ್ರತಿಕ್ರಿಯೆ ಅಸಹಜ
ಆಸೆಗಳಿಗೆ ಕೊನೆ ಇಲ್ಲವೆಂಬುದು ನಿಜ
ದೀಪದ ಬುಡದಲ್ಲಿ ಕತ್ತಲೆ ಇರುವುದು ಮನುಜ||
ವಿದ್ಯುತ್ ಇಲ್ಲದಿರುವುದೇ ಆಯಿತು ಸಜಾ
ನನ್ನ ಆಲೋಚನೆಗಳಾದವು ವಜಾ
ಮುಚ್ಚಿ ಹೋಯಿತು ಯೋಚನೆಯ ಕಣಜ
ಕಾರಣ ವಿದ್ಯುತ್ ಬಂತೆಂದು ಹೇಳಿದ ಅನುಜ||