ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ


ಹಸಿರೆಲೆಯ ಕಾಡಿನಲ್ಲಿ ಏಕಾಂಗಿ ಸಂಚಾರಿ ನಾನು
ಪಟ್ಟಣದ ಕಡೆ ಹೋಗುವ ರಸ್ತೆಯನ್ನು ಕಣ್ಣಳತೆಯವರೆಗೂ ನೋಟ ಬೀರಿದೆ
ಆಧುನಿಕತೆಯ ಆಡಂಬರಕೆ ಗಿಡ ಮರಗಳ ಕಡಿದು ಮಣ್ಣಿನ ರಸ್ತೆ ಕಾಂಕ್ರೀಟ್ ಮಯವಾಗಿತ್ತು
ರಸ್ತೆಯ ಅಂಕು ಡೊಂಕು ಮಾಯವಾಗುವವರೆಗೂ ದೃಷ್ಟಿ ಕದಲಿಸಲಾಗಲಿಲ್ಲ
ಮನದ ರಸ್ತೆಗಳು ಇಬ್ಬಾಗವಾಗಿ ಎದೆಯಲ್ಲಿ ಹೊಯ್ದಾಟ ಶುರುವಾಗಿತ್ತು
ಮಾಲ್ ಗಳು ,ಹಂಗಿಲ್ಲದ ಬದುಕು
ದುಡಿದ ಕೆಲಸಕ್ಕೆ ಕೈ ತುಂಬಾ ಸಂಬಳ ಕೊಡುವೆನೆಂದು ಅತ್ತ ಪಟ್ಟಣ ಆಹ್ವಾನಿಸುತಿತ್ತು
ಉದರ ಹಸಿವು ನೀಗಿಸಲು ಜಮೀನು,
ಎಸಿಯ ಬದಲು ಮರಗಿಡಗಳು ಬೀಸಿದ ತಂಗಾಳಿ
ಕೈಗೆಟುಕದ ದರದಲ್ಲಿದ್ದ ಜೀವಜಲವು ಬಿಟ್ಟಿಯಾಗಿ ಕೊಡುವೆನೆಂದು ಇತ್ತ ಪ್ರಕೃತಿಯು ಕೈ ಬೀಸಿ ಕರೆಯುತಿತ್ತು
ಪಬ್ ಗಳು, ಜಿಮ್ ಗಳು , ವಾಟರ್ ಪಾರ್ಕ್ ಗಳು ಮತ್ತೆ
ಮುಗುಳು ನಕ್ಕು ಕರೆದಂತಾಯಿತು
ಹೊಳೆಯಲ್ಲಿ ಈಜಾಡಿದ್ದು, ಜೋಕಾಲಿ ಜೀಕಿದ್ದು
ಮರ ಏರಿದ್ದು ಬಾಲ್ಯದ ದಿನಗಳು ಕಣ್ಮುಂದೆ ಸುಳಿದಂತಾಯಿತು
ನನ್ನ ನಿರ್ಧಾರ ಗಟ್ಟಿಯಾಯಿತು
ಪಟ್ಟಣದ ಕನಸು ಕಾಣುವುದ ಬಿಟ್ಟೆ
ಹಳ್ಳಿ ತೊರೆಯುವ ನಿರ್ಧಾರ ಬದಲಾಯಿಸಲಾಗಲಿಲ್ಲ
ಹಸಿರೆಲೆಯ ಕಾಡಿನಲ್ಲಿ ಏಕಾಂಗಿ ಸಂಚಾರಿ ನಾನು
ಗುರಿ ಗುರುವಾಗಿರುವ ಪ್ರಕೃತಿ ಮಾತೆ ಜೊತೆಯಲ್ಲಿ ಸಂತಸದಿಂದಿರುವೆ ನಾನು