ನನ್ನ ತಾಯಿ
ನನ್ನ ತಾಯಿ
1 min
300
ಅಚ್ಚಗಲದ ಕುಂಕುಮ
ಇಲಕಲ್ಲ ದಡಿಯ ಸೀರಿ
ಸೌಂದರ್ಯದ ಆ ದೇವಿ
ನನ್ನ ತಾಯಿ ಶ್ರೀದೇವಿ
ಅಮ್ಮನ ಮಡಿಲ ಕೂಸಾಗಿ
ಪೋಷಿಸುವ ಕೈಗಳ ಹೂವಾಗಿ
ಬೆಳೆದೆ ನಾ ಗಿಡವಾಗಿ ಮರವಾಗಿ
ಅದಕೆ ಕಾರಾಣಕರ್ತೆ ಆ ತಾಯಿ ನನ್ನ ತಾಯಿ
ತಿದ್ದಿದಳು ತೀಡಿದಳು
ಹರಸಿದಳು ಹರಕೆ ಹೊತ್ತಳು
ನನಗಾಗಿ ಜೀವ ತೇಯ್ದಳು
ಆ ತಾಯಿ ನನ್ನ ತಾಯಿ
ಸರಳತೆಯ ಕಲಿಸಿದಳು
ತಾಳ್ಮೆಯನು ಭೋದಿಸಿದಳು
ಜೀವನ ರಥದಲ್ಲಿ ಮಾರ್ಗದರ್ಶಿಯಾದಳು
ಆ ತಾಯಿ ನನ್ನ ತಾಯಿ