STORYMIRROR

Aruna Kademani

Inspirational

4  

Aruna Kademani

Inspirational

ಅಪ್ಪ ಗೌಣ ಏಕೆ ?

ಅಪ್ಪ ಗೌಣ ಏಕೆ ?

1 min
135

ಅಮ್ಮನ ಕೈಗೂಸಾಗಿ ಬೆಳೆದೆವು ನಾವು

ಅವಳ ಕೈಯಾಧಾರ ಅಪ್ಪನೆಂದು ತಿಳಿಯಲ್ಲಿಲ್ಲವೇಕೆ?

 

ಹಸಿದ ಹೊಟ್ಟೆಯನು ತಣಿಸಿದಳು ಅಮ್ಮ

ಹಸಿವು ತಣಿಸಲು ದುಡಿದ ಅಪ್ಪನ ಕೈಗಳು ಕಾಣಲಿಲ್ಲವೇಕೆ?


ಕಣ್ಣೀರನ್ನು ಒರೆಸಿದಳು ಅಮ್ಮ 

ಹೆಗಲ ಮೇಲೆ ಕುರಿಮರಿಯೆಂದು ಎತ್ತಾಡಿಸಿ ಕಣ್ಣೀರನ್ನೇ ಮರೆಸಿದ ಅಪ್ಪನನ್ನು ಮರೆತುದೇಕೆ ?


ಕಷ್ಟಗಳ ಸೋಂಕು ತಗಲದಂತೆ ಬೆಳೆಸಿದಳು ಅಮ್ಮ 

ಕಷ್ಟಕ್ಕೆ ಎದೆಗೊಟ್ಟು ಸುಖದ ಛಾಯೆಯನ್ನು ಹರಡಿಸಿದ ಅಪ್ಪನ ನೋವು ಅರಿಯಲಿಲ್ಲವೇಕೆ ?


ಹಬ್ಬ ಹರಿದಿನಗಳಲಿ ಸಂಭ್ರಮಿಸೆದೆವು ನಾವು ಹೊಸ ಬಟ್ಟೆಗಳನ್ನುಟ್ಟು 

ಅವೇ ಹಳೆಯ ಎರಡು ಜೋಡಿ ಬಟ್ಟೆಗಳಲ್ಲಿ ಹಬ್ಬವನಾಚರಿಸಿದ ಅಪ್ಪನ ಕಂಡು ಕಣ್ಣು ಒದ್ದೆಯಾಗಲಿಲ್ಲವೇಕೆ ?


ಅಮ್ಮ ಇದ್ದರೆ ತವರೂರು ಅನ್ನುತ್ತಾರೆ 

ತವರೂರಿನ ಮರ್ಯಾದೆ ಅಪ್ಪ ಎಂದು ಯೋಚಿಸಲಿಲ್ಲವೇಕೆ ?


ನಾಗರಿಕನಾಗಿ ಸ್ಥಾನ ಮಾನಗಳನ್ನು ಗಳಿಸಿದೆವು ನಾವು 

ಅದಕೆ ದಾರಿ ದೀವಿಗೆಯಾದ ಅಪ್ಪನನ್ನು ಕಡೆಗಣಿಸುವುದೇಕೆ?


ಅಪ್ಪ ಅಮ್ಮರ ಪ್ರೀತಿ ಪ್ರೇಮ ಪೂರಕವೇ ಹೌದು 

ಆದರೂ ಅಪ್ಪನ ನಿಷ್ಕಳಂಕ ಪ್ರೇಮ ಗೌಣವೆನ್ನುವದೇಕೆ ?


ಅಮ್ಮ ವಾತ್ಸಲ್ಯದ ಮೂರ್ತಿ

ಅಪ್ಪ ಧೃಡತೆ, ವಿಶ್ವಾಸದ ಪ್ರತಿಮೂರ್ತಿ 


ಅವರಿಬ್ಬರ ಪ್ರೀತಿ ನಮ್ಮ ಪಾಲಿನ ವರವು

ಅಪ್ಪ ನೀನಿಲ್ಲದ ಮನೆ ಬರೀ ಬರಡು ಬರೀ ಬರಡು 

       

     



Rate this content
Log in

Similar kannada poem from Inspirational