ಅಪ್ಪಾ
ಅಪ್ಪಾ
ನನ್ನ ಕಣ್ಣಿಗೆ ದೃಷ್ಟಿ ನೀವು
ನನ್ನ ಉಸಿರಿಗೆ, ಧ್ವನಿ ನೀವು
ನನ್ನ ಚಲನೆಗೆ ಆಸರೆ ನೀವು
ನನ್ನ ಹಠಕ್ಕೆ ಸೋಲುವವರು ನೀವು
ನನ್ನ ಮೌನದಲ್ಲಿ, ಕೋಪ
ಗುರುತಿಸುವವರು ನೀವು
ಚಿಕ್ಕವಳೆಂದು ಮುದ್ದು
ಮಾಡಿದವರು ನೀವು
ನಾನೀಗ ದೊಡ್ಡವಳಾಗಿದ್ದೇನೆ ಎಂದರೂ
ನಂಬುತ್ತಿಲ್ಲ ನೀವು
ಈಗಲೂ ಎರಡು ಜಡೆಯ
ಕಾವೇರಿ ಎನ್ನುತ್ತೀರಿ ನೀವು
ಅಪ್ಪಾ ಐ ಲವ್ ಯೂ ಪಾ!