STORYMIRROR

Shiqran Sharfuddin

Classics Others

3  

Shiqran Sharfuddin

Classics Others

ಗಜಲ್

ಗಜಲ್

1 min
266

ಪ್ರಸ್ತುತ ಸ್ಥಿತಿ ಅರಿತರೂ, ಹಣೆಬರಹ ವಿಮರ್ಶಿಸಿದರೂ ಅಳುವೇ ಬರುವುದು 

ತಿರುಗಿ ಭೂತ ನೋಡಿದರೂ, ಭವಿಷ್ಯತ್ ಚಿಂತಿಸಿದರೂ ಅಳುವೇ ಬರುವುದು 


ಹೇಳಿದ್ದನ್ನೆಲ್ಲಾ ಜ್ಞಾಪಿಸಿಕೊಳ್ಳುವುದು ಒಮ್ಮೆ ಬಹಳ ಕಷ್ಟಕರವಾಗಿತ್ತು 

ಅನುಭವಿಸಿದ್ದನ್ನೆಲ್ಲಾ ಇಂದು ಜ್ಞಾಪಿಸಿಕೊಂಡರೆ ಅಳುವೇ ಬರುವುದು 


ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ ಜನನಿಬೀಡ ಮಾರುಕಟ್ಟೆಗೆ 

ಆ ಮುಗ್ಧ ಮುಗುಳ್ನಗೆಯ ಚಹರೆ ಕಾಣ ಸಿಕ್ಕರೆ ಅಳುವೇ ಬರುವುದು!


ಪ್ರತಿ ಇರುಳು ವರ್ಷಿಸುವುದು ಅದೇ ಚಿರಪರಿಚಿತ ತಂಪಾದ ಹನಿಗಳು;

ಆದರೆ, ಇಂದು ಸುರಿಯುವ ಮಳೆಯ ಕುರಿತು ಚಿಂತಿಸಿದರೆ ಅಳುವೇ ಬರುವುದು 


ದೇವನನು ದೂಷಿಸುವುದೋ? ತನ್ನನ್ನು ತಾನು ಜರೆಯುವುದೋ? ತಿಳಿಯದು 

ಔಚಿತ್ಯ ಪ್ರಜ್ಞೆ ಇದ್ದರೂ ಕಲ್ಪನಾಮಯದಲ್ಲಿ ಜಾರಿದರೆ ಅಳುವೇ ಬರುವುದು



Rate this content
Log in

Similar kannada poem from Classics