💝 ನಝಮ್ 💝
💝 ನಝಮ್ 💝
ವಾತ್ಸಲ್ಯದ ಒಂದು ಹಾಡುವಿಕೆಯಾಗಿದೆ; ಅಲೆಗಳ ಹರಿವಾಗಿದೆ;
ಬಾಳ್ವಿಕೆ ಇನ್ನೇನಲ್ಲದೆ ನನ್ನಿನ್ನ ಪ್ರೇಮಗೀತೆಯಾಗಿದೆ!
ಏನನ್ನಾದರೂ ಗಳಿಸುವಲ್ಲಿ, ಏನನ್ನಾದರೂ ಕಳೆಯುತ್ತೇವೆ!
ಏನನ್ನಾದರೂ ಕಳೆದು, ಏನನ್ನಾದರೂ ಗಳಿಸುತ್ತೇವೆ!
ಜೀವನದ ಅರ್ಥವೇ ಆಗಮಿಸಿ ಪುನಃ ನಿರ್ಗಮಿಸುವುದು!
ಅಸ್ತಿತ್ವದ ಕೆಲವು ಕ್ಷಣಗಳಲ್ಲಿ, ಇಡೀ ಜೀವಮಾನವ ಕದಿಯಬೇಕು
ಬಾಳ್ವಿಕೆ ಇನ್ನೇನಲ್ಲದೆ ನನ್ನಿನ್ನ ಪ್ರೇಮಗೀತೆಯಾಗಿದೆ!
ನೀ ನದಿಯ ಸೆಳೆತಾದರೆ, ನಾ ನಿನ್ನ ಕಿನಾರೆಯಾಗುವೆನು!
ನೀ ನನ್ನ ಆಧಾರ, ನಾ ನಿನ್ನ ಆಧಾರವಾಗುವೆನು
ಅಕ್ಷಿಗಳಲ್ಲಿ ಸಮುದ್ರವಿದೆ, ಆಶೆಗಳ ಜಲವಿದೆ!
ಬಾಳ್ವಿಕೆ ಇನ್ನೇನಲ್ಲದೆ ನನ್ನಿನ್ನ ಪ್ರೇಮಗೀತೆಯಾಗಿದೆ!