STORYMIRROR

mamta km

Romance Classics Inspirational

4  

mamta km

Romance Classics Inspirational

ಆಷಾಢದ ವಿರಹ.

ಆಷಾಢದ ವಿರಹ.

1 min
406

ನೀ ಬಂದೆ ನನ್ನ ಬದುಕಲ್ಲಿ,

ಹೊಸ್ತಿಲಲ್ಲಿ ಪಡಿ ಎಡವಿ ಕಾಲಿಟ್ಟೆ,

ಬರಿ ನನ್ನ ಮನೆಗಲ್ಲಾ ಮನದೊಳಗೂ,

ನಿನ್ನ ಒಲವ ಕುಡಿನೋಟ,

ನನ್ನ ಮನ ಗೆದ್ದಿತು,


ನಿನ್ನ ಕಾಳಜಿ ಪ್ರೀತಿ ಹೆಚ್ಚಿಸಿತು,

ನನ್ನ ಒಲವಿನ ರೀತಿ,

ಹಗಲು ರಾತ್ರಿ ಬಂದಿಯಾದೆ,

ನಿನ್ನ ಪ್ರೇಮ ಪಾಶದಲ್ಲಿ,

ನಾ ಕಳೆದು ಹೋದೆ..


ನನ್ನ ದಿನಚರಿಯ ಬದಲಿಸಿತು,

ನನ್ನ ಆಸಕ್ತಿಗಳು ಬದಲಾಗಿ,

ನಮ್ಮಿಬ್ಬರ ಹೊಸ ಬದುಕು,

ಬರೆಯಿತು ಹೊಸ ಭಾಷ್ಯ

ಎರಡು ಜೀವ ಆಯಿತು ಒಂದು.


ಇದೀಗ ಮುಂಗಾರು ಬಂತು,

ಹನಿ ಹನಿ ಕಥೆ ಹೇಳಿತು

ನಿನ್ನ ಒಲವಿನ ಮಧುರ್ಯವನ್ನು

ನಿನ್ನೊಡನೆ ನಾ ಕುಳಿತಿದ್ದೆ

ಬೀಸುವ ಗಾಳಿಗೆ ಮುಖವಿಟ್ಟು


ತಂಗಾಳಿ ಹಾಡಿತ್ತು ಹೊಸರಾಗ

ಮಿಂಚು ಹೊಳೆದಿತ್ತು ಆಗ,

ನಿನ್ನ ಅರಳುಗಣ್ಣಿನಲಿ,

ನಿನ್ನ ಕಣ್ಣ ಬಿಂಬದಲಿ ನಾ,

ನನ್ನೇ ಕಂಡಿದ್ದೆ, ..ಆದರೆ,


ನೀನೀಗ ಹೋಗಿ ಕುಳಿತಿರುವೆ,

ಆಷಾಢದ ಶಾಸ್ತ್ರದ ನೆಪ ಹೇಳಿ,

ದೂರ ತವರಲಿ ಉಳಿದಿರುವೆ,

ನಾನಿಲ್ಲಿ ಒಂಟಿಯಾಗಿ ಕುಳಿತು,

ನಿನ್ನ ನೆನಪಲ್ಲಿ ಕಳೆದು ಹೋದೆ.


Rate this content
Log in

Similar kannada poem from Romance