ಅನುರಾಗದೊಡವೆ
ಅನುರಾಗದೊಡವೆ


ಪ್ರತಿದಿನವೂ ಇರಲಿ,
ಅನುರಾಗದೊಡವೆ.
ಅನು ಕ್ಷಣಕ್ಷಣವು ಪುಳಕ,
ಮೊಗದಲ್ಲಿ ಮಂದಹಾಸ,
ಪ್ರೀತಿ ಚಿಗುರೊಡೆದ ಮೇಲೆ,
ಅನುದಿನವು ಒಲವಮಾಲೆ.
ಹುಸಿಮುನಿಸು ಹುಸಿಕೋಪ,
ತರ ತರಹದ ವಿರಹ ತಾಪ,
ದೂರವಿದ್ದಷ್ಟು ಹೆಚ್ಚುವುದು,
ಜೀವಗಳ ಒಲವ ಪರಿತಾಪ.
ಜೀವ ಜೀವಗಳ ನಡುವೆ,
ಮೂಡಿದ ಮೋಹದ ಬೆಸುಗೆ,
ಒಂದಾಗಿ ಬಾಳಿದರೆ ಸಾಕು,
ಅದೇ ಕೊಡಮಾಡುವ ಕೊಡುಗೆ.
ಬೇಲಿ ಯಾಕೆ ಪ್ರೇಮದೂರಿಗೆ,
ನಗುವ ಹೂವರಳಿ ಘಮಘಮಿಸಲಿ,
ಚಿಗುರಿ ಅರಳಲಿ ಒಲವು ಹೂ,
ಪ್ರೇಮಲತೆ ಹಬ್ಬಿ ಬಾಳು ನಳನಳಿಸಲಿ.