STORYMIRROR

Surabhi Latha

Romance Classics Inspirational

4  

Surabhi Latha

Romance Classics Inspirational

ನೋಟ ಬೆರೆಯಲೇ ಇಲ್ಲ

ನೋಟ ಬೆರೆಯಲೇ ಇಲ್ಲ

1 min
622

ಕಣ್ಣು ಕಣ್ಣು ಬೆರೆಯಲೇ ಇಲ್ಲ 

ಮನದ ಕಣ್ಮಣಿ ನೀನಾಗಿ ಹೋದೆಯಲ್ಲ 

ಕೈಗೆ ಕೈ ಎಂದೂ ಸೋಕಲೇ ಇಲ್ಲ 

ಹೃದಯ ಬಡಿತವಾಗಿಬಿಟ್ಟೆಯಲ್ಲ 


ನಿಂತು ನಾಲ್ಕು ಮಾತಾಡುವ ಮುನ್ನ 

ಎದೆಯೊಳಗೆ ಮನೆಮಾಡಿಬಿಟ್ಟೆ ಚೆನ್ನ 

ಅನುರಾಗದ ಅಲೆ ಏಳುವ ಹೊತ್ತಿಗೆ 

ನಾಚಿಕೆ ತಬ್ಬಿ ಮೌನವಾದುದೇಕೆ 


ಒಂದೊಂದು ಕ್ಷಣವು ಕಾದ ಸಮಯ 

ಎದುರಿಗೆ ನೀ ಬಂದಾಗ ಇನಿಯ 

ತಬ್ಬಿ ಹಿಡಿವ ಆಸೆಗೆ ಕಡಿವಾಣ ಬಿತ್ತು 

ನಿಮಿಷದಲಿ ನೀನಾದೆ ನನ್ನ ಸ್ವತ್ತು 


ಕಸಿದುಕೊಂಡು ಬಿಡಲೇನು ನಿನ್ನ 

ಒಪ್ಪಿಕೊಂಡು ಅಪ್ಪಿ ಬಿಡುವೆಯ ನನ್ನ 

ಸರಿದು ಹೋಗಲಿ ಇಬ್ಬರ ಈ ಮೌನ 

ಆವರಿಸಿ ಬಿಡು ಬಿಡದಂತೆ ಹೃದಯವನ್ನ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance