STORYMIRROR

Surabhi Latha

Classics Inspirational Others

4  

Surabhi Latha

Classics Inspirational Others

ಮನಸು

ಮನಸು

1 min
441

ದುಃಖ ತಪ್ತದಲ್ಲಿ ಏನೆಂದು ಬರೆಯಲಿ 

ಕೋಪದ ಕಿಡಿಯು ಹೇಗೆಂದು ಹೇಳಲಿ 


ದಿನವೊಮ್ಮೆಯಂತೆ ಎಂದೂ ನೆನೆಯಲಿಲ್ಲ 

ಮಾರಣ ಹೋಮ ನಡೆದಾಗ ನೊಂದೆವಲ್ಲ 

ಮೋಜು ಮಸ್ತಿಯಲಿ ಕುಣಿದವು ನವ ಪೀಳಿಗೆ 

ನಾನು ನೀನು ಎಂದು ಕಚ್ಚಾಡಿದವು ಕೊನೆಗೆ 


ದೇಶ ಯೋದರ ಬಗ್ಗೆ ಇಲ್ಲ ತಿಳುವಳಿಕೆ 

ಪ್ರೀತಿ ಮೋಹ ಎಂಬುದೇ ಕನವರಿಕೆ 

ಚಳಿ ಗಾಳಿಯಲ್ಲೂ ನಗುತ ನಿಂತ ಮನ 

ಇಂದು ಗುರುತೇ ಸಿಗದೆ ತುಂಬಿದೆ ಸ್ಮಶಾನ 


ಓದದೇ ಬರೆಯದೇ ಕಾಲಾಹರಣ ಮಾಡಿ 

ಕುಣಿತ ಕುಡಿತದಲಿ ಹೆಣ್ಣು ಗಂಡು ಕೂಡಿ 

ಅದು ಆಗಬೇಕು ಇದು ಆಗಬೇಕು ಎನ್ನುವವರೇ 

ಯೋದನಾಗಬೇಕೆಂದು ಎಂದು ಹೇಳುವರೆ? 


ನಿರುದ್ಯೋಗ ದಲಿ ಕಳ್ಳರಾಗುವ ಬದಲು 

ಮನಷ್ಯತ್ವದಿಂದ ಚಿಂತಿಸಿ ಮೊದಲು 

ಹೊರಡಿ ಗಡಿಯ ನಾಡಿನ ಕಡೆಗೆ 

ಕೈ ಗೂಡಿಸಿ ನಮಿಸಿರಿ ಯೋದನ ನಡಿಗೆ 


ನಿಲ್ಲಲಿ ದುಂದು ವೆಚ್ಚವನು ಇಂದಾದರೂ 

ಕೂಡಿಟ್ಟ ಕಾಸು ಉಪಯೋಗ ಬರಲಿ 

ಯೋದರ ಒಳಿತಿಗೆಂದು 

ಅಶಾಂತಿಯ ನೆಲೆಯಾಗಿದೆ ಮನವಿಂದು 


ಜೈ ಭಾರತ ಮಾತೆಯ ಕುಡಿಗಳೇ 

ಶಾಂತಿ ಸಿಗಲಿ ನಿಮಗೆಂದು ಕೋರುವೆ ಕೊನೆಗೆ 

ಕಣ್ಣೀರ ತರ್ಪಣ ನಿಮಗಿಂದು 

ಮೌನದಿ ಮಿಡಿದಿದೆ ಒಡಲಿಂದು 



Rate this content
Log in

Similar kannada poem from Classics