ಕಂಡಿರಾ ಅವನ
ಕಂಡಿರಾ ಅವನ
ಕಡಲ ತೀರದಲಿ ಕಲ್ಲಾಗಿ ಕುಳಿತಿಹನೆ
ಅಂಗನೆಯರ ಸಂಗದಿ ಮೈ ಮರೆತಿಹನೆ
ಕಾದು ಕುಳಿತ ರಾಧೆಯ ಮರೆತನೇಕೆ ಮಾಧವ
ಎದೆಯ ತುಂಬಾ ನೋವ ತಂದನೇಕೆ ಕೇಶವ
ಹಗಲು ಇರುಳು ಸುತ್ತ ತಿರುಗಿ ನೋಡಲು
ಕಾಣದೆ ಅವನ ಕಂಡೆ ಬರಿಯ ಕತ್ತಲು
ಚೆಂದ್ರನ ಬೆಳದಿಂಗಳಿಗೂ ತಂಪಾಗದಿದೆ ಕಣ್ಣುಗಳು
ಭಯದಿ ನಡುಗಿಸಿದೆ ನೀನಿಲ್ಲದ ಇರುಳು
ಬಂದನೇನೋ ಕಂಡಿರೇನೋ ಕೂಡು ಬಾ....
ಎದೆಯಲ್ಲಿ ಸಣ್ಣ ನೋವ ನೀಗಿಸು ಬಾ
ಅಂತರಾಳವ ಅರಿಯೆ ನೀನು
ನಿನ್ನ ಬಿಟ್ಟು ಹೇಗಿರಲಿ ನಾನು
ಸಣ್ಣ ನಗೆಯಲ್ಲಿ ಹೊಂಚು ಕಣ್ಣಲ್ಲಿ
ಬೆರೆತೆ ಎದೆಯ ಪ್ರೇಮ ರಾಗದಲ್ಲಿ
ಹುಸಿ ಮುನಿಸು ತೋರದೆ ನನ್ನನ್ನಿಂದು ಕಾಡದೆ
ಸಂತಸವನು ನೀ ಕರುಣಿಸಬಾರದೆ
ರಂಗಾ...ವಿಠ್ಠಲ ಮಾಧವಾ ಕೇಶವ
ಬೇಗ ಬಂದು ನೀಗು..ನನ್ನ ನೋವ