ಮದುಮಗ
ಮದುಮಗ
ಇನಿಯ ಬರೆದನೊಂದು ಪ್ರೇಮ ಪತ್ರ
ಅದು ನೋಡಲು ಮಾತ್ರ ಬಲು ವಿಚಿತ್ರ
ಬರೆದದ್ದು ಅರ್ಥವಾಗದು
ಆದರೂ ಪ್ರೇಮ ವ್ಯರ್ಥ ವಾಗದು
ತಪ್ಪುಗಳೇ ಅದರಲ್ಲಿ ಬಹಳ
ಅವ ಕನ್ನಡ ಬರೆವುದೇ ವಿರಳ
ಕರೆದೆ ಗೆಳತಿಯನ್ನು " ಸರಳ..."
ಓದಿ, ಬಿಟ್ಟಳು ೨೪ ದಂತ ಹವಳ
ಕೊಂಬು,ಒತ್ತಕ್ಷರಗಳು ಮಾಯ
ಬರೆದಿರುವುದ ಓದಲೇ ಭಯ
ಅರಿವುದೆಂತು ಅವನ ಭಾವನೆ
ಗೊಂದಲಗೊಂಡು ಕೂತೆ ಸುಮ್ಮನೆ
ಅರಿತನೇನೋ ನನ್ನ ಪೇಚಾಟ&
nbsp;
ಕ್ಷಮೆ ಕೇಳಿ ಶುರುಮಾಡಿದ ದೊಂಬರಾಟ
" ಮೊದಲು ಕನ್ನಡ ಕಲೆತು ಬಾ " ಎಂದೆ
ಹೆಮ್ಮೆಯಲಿ " ಸರಿಯಾಗಿ ಹೇಳಿದೆ" ಎಂದರು ತಂದೆ
ಕನ್ನಡ ಕಲಿಯುವುದರಲಿ ವರ್ಷ ಕಳೆದ
ಹೊಸ ಮಧು ಮಗ ನನಗಾಗಿ ಇಳಿದ
ಓಡಿ ಬಂದ ನನ್ನಿನಿಯ ಗಾಭರಿಗೊಂಡಿತ್ತು ನೋಟ
ಪಟ ಪಟ ಪ್ರೇಮ ಕವನ ನುಡಿದೇ ಬಿಟ್ಟ
ಸಂತಸದಲಿ ಅವನ ಓಡಿ ತಬ್ಬಿ ಬಿಟ್ಟೆ
ಹೊಸ ಮಧು ಮಗನ ಮೂತಿ ಆಯಿತು ಸೊಟ್ಟೆ
ನಾವಿಬ್ಬರೂ ಈಗ ಕನ್ನಡ ಸಹಪಾಟಿಗಳು
ಎರಡು ಮಕ್ಕಳೇ ನಮ್ಮ ವಿಧ್ಯಾರ್ಥಿಗಳು