STORYMIRROR

Surabhi Latha

Romance Classics Inspirational

4  

Surabhi Latha

Romance Classics Inspirational

ಏನು ಇದು

ಏನು ಇದು

1 min
762

ಕಣ್ಣೊಟವೋ ಕಲ್ಪನೆಯೋ 

ಕಲಕಿತು ಮನವೆಲ್ಲವೂ 

ಬಿಟ್ಟು ಕೊಡಲಾರೆ 

ನಿನ್ನ ಬಿಟ್ಟಿರಲಾರೆ 


ಏನೋ ಇದು ಪ್ರೀತಿಯೋ 

ಮೋಹವೋ ನಾ ಅರಿಯೆ 


ನಕ್ಕಾಗ ನಗುವೆನು ನಾನು 

ಅತ್ತಾಗ ಅಳುವೆ ನೀನು 

ಏಕೀ ಭಾವನೆ ನನ್ನಲ್ಲಿ 

ಏನಿದು ಈ ರೀತಿ ನಿನ್ನಲ್ಲಿ  


ಏನೋ ಇದು ಪ್ರೀತಿಯೋ 

ಮೋಹವೋ ನಾ ಅರಿಯೆ 

 

ಹೃದಯವೆಂಬ ಮಂದಿರದಲ್ಲಿ 

ನೀನಿರಲು ಸಂತಸ 

ಸರಿದೊಡನೆ ದೂರ 

ಸಹಿಸಲಾಗದ ವಿರಹ 


 ಉಸಿರಂತೆ ನೀನಾಗಿಹೆ 

ನಿನ್ನ ಬಳಸಿದ ಬಳ್ಳಿ ನಾನಾಗಿಹೆ 

ಎದೆಯ ಕನ್ನಡಿ ನೀನು 

ನಿನ್ನ ಪ್ರತಿಬಿಂಬ ನಾನು 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance